ಅಪಹರಣವಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

NELAMANGALA DILEEPA
Published on

ಬೆಂಗಳೂರು ಗ್ರಾಮಾಂತರ: ನೆಲಮಂಗಲ ನಗರದಲ್ಲಿ ಏ.27ರಂದು ಅಪಹರಣವಾಗಿದ್ದ ವ್ಯಕ್ತಿ ಸೋಮವಾರ ತುಮಕೂರಿನ ಜಯನಗರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮಾಗಡಿ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿ ದಿಲೀಪ್‌ಕುಮಾರ್ (28) ಮೃತ. ನೆಲಮಂಗಲ ನಗರ ಹಾಗೂ ತುಮಕೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಭಾನುವಾರ ದಿಲೀಪ್‌ಕುಮಾರ್ ಪತ್ನಿ ಅಮೃತಾ ಜತೆಗೆ ನೆಲಮಂಗಲಕ್ಕೆ ಬಂದಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ದಿಲೀಪ್‌ಕುಮಾರ್‌ನನ್ನು ಅಪಹರಿಸಿದ್ದರು. ಈ ಬಗ್ಗೆ ಪತ್ನಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೋಮವಾರ ಮುಂಜಾನೆ ತುಮಕೂರಿನ ಜಯನಗರದಲ್ಲಿ ದಿಲೀಪ್‌ಕುಮಾರ್ ಶವ ಪತ್ತೆಯಾಗಿದೆ.

ಎರಡನೇ ಪತ್ನಿ ಅರೋಪ:

ಮೊದಲನೇ ಪತಿ ದಿನೇಶ್‌ನನ್ನು ತೊರೆದಿದ್ದ ಅಮೃತಾಳ ಇಬ್ಬರು ಮಕ್ಕಳು ದಿನೇಶ್ ತಾಯಿ ಮನೆಯಲ್ಲಿ ಇದ್ದರು. ಇದೇ ವಿಚಾರವಾಗಿ ಅಮೃತಾ ಹಾಗೂ ದಿನೇಶ್ ನಡುವೆ ಸಾಕಷ್ಟು ಬಾರಿ ಜಗಳವಾಗಿತ್ತು. ಈ ವಿಚಾರವಾಗಿ ಅಮೃತಾಳ ಎರಡನೇ ಪತಿ ದಿಲೀಪ್‌ಕುಮಾರ್ ಸಹಾಯ ಮಾಡುತ್ತಿದ್ದ ಎನ್ನಲಾಗಿದ್ದು, ಈ ದ್ವೇಷದ ಹಿನ್ನೆಲೆಯಲ್ಲಿ ದಿನೇಶ್ ಕಡೆಯವರು ಹತ್ಯೆ ಮಾಡಿರಬಹುದು ಎಂಬುದು ಎರಡನೇ ಪತ್ನಿ ಅಮೃತಾ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net