

ದೇವದುರ್ಗ: ತಾಲೂಕಿನ ಹೊರಟಿಗೇರಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಜಾಲಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲೂ ಪ್ರಶಸ್ತಿಗಳು ಬಂದಿವೆ. ಸಿಂಗಲ್ ರನ್ನಿಂಗ್ ಸ್ಪರ್ಧೆ, ಥ್ರೋ ಬಾಲ್, ವಾಲಿಬಾಲ್, 4*100 ರೀಲೆ, ಚಕ್ರ ಎಸೆತ, 400 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತಗಳಲ್ಲಿ ಬಾಲಕರು ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಥ್ರೋ ಬಾಲ್, 4*100 ರೀಲೆ, ಚಕ್ರ ಎಸೆತ, 600 ಮೀಟರ್ ಓಟ, ಗುಂಡು ಎಸೆತದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದಿದ್ದಾರೆ. ಗ್ರೂಪ್ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಹಾಗೂ ಸಿಂಗಲ್ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ತಂಡ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿವೆ ಎಂದು ಪ್ರಾಚಾರ್ಯ ಸೋಮಶೇಖರ ಪಾಟೀಲ್ ತಿಳಿಸಿದ್ದಾರೆ.