ಮುರಾರ್ಜಿ ಶಾಲೆಗೆ ಪ್ರಿಯಾಂಕಾ ಮೊದಲು

sslc result
Published on

ಕಟಕೋಳ: ಸ್ಥಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು

ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಶಾಲೆ ಶೇ. 98.18ಲಿತಾಂಶ ಪಡೆದಿದೆ. ಪ್ರಿಯಾಂಕಾ ದಳವಾಯಿ ಶೇ.99.36 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾಳೆ. ಪೂರ್ಣಿಮಾ ಪಾಟೀಲ ಶೇ.98.08, ಸ್ವಾತಿ ಕಂಬಾರ ಶೇ.96.64, ಆಕಾಶ ಲಮಾಣಿ ಶೇ.95.20, ಸಂಗನಗೌಡ ಮಾಳಪ್ಪನವರ ಶೇ.94.56, ಪ್ರಿಯಾಂಕಾ ಪಡಸಾಲಿ ಶೇ.91.36 ಅಂಕ ಪಡೆದಿದ್ದಾರೆ. 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಅನಿಲ ಪಾರಣ್ಣವರ, ಶಿಕಿ ವಿಜಯಲಕ್ಷಿ$್ಮ ಪಮ್ಮಾರ, ಸಿದ್ದು ಸಾರವಾಡ, ಮೋನಪ್ಪ ಪತ್ತಾರ, ಮಹಾದೇವಪ್ಪ ಧೂಳಪ್ಪನವರ, ಅರವಿಂದ ಬಡಿಗೇರ, ಮುರುಗೇಶ ಢವಳೇಶ್ವರ, ಶಿವಾನಂದ ತಿಗಡಿ, ಹನುಮಂತ ಸೋಮಣ್ಣವರ, ಯಲ್ಲಪ್ಪ ಕುಂಬಾರ, ರಮೇಶ ಮಡಿವಾಳರ, ಎಂ.ಬಿ. ಮಲ್ಲೂರ, ಗುರುನಾಥ ಕಾಂಬಳೆ ಇತರರು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net