ಮುರಾರ್ಜಿ ದೇಸಾಯಿ ಶಾಲೆಗೆ ಸಮಗ್ರ ಪ್ರಶಸ್ತಿ

nrp 3 (3)
Published on

ಎನ್.ಆರ್.ಪುರ: ಕೆಪಿಎಸ್‌ನಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ ಬಂದಿದೆ ಎಂದು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯೆ ಪೂರ್ಣಿಮ ತಿಳಿಸಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳು 600 ಮೀಟರ್ ಓಟದಲ್ಲಿ ಪ್ರಥಮ, ಬಾಲಕರ ಶಾಟ್‌ಪುಟ್‌ನಲ್ಲಿ ಪ್ರಥಮ, ಬಾಲಕಿಯರ 200 ಮೀಟರ್ ಓಟದಲ್ಲಿ ಪ್ರಥಮ, ಬಾಲಕಿಯರ ಖೋ ಖೋದಲ್ಲಿ ಪ್ರಥಮ, ಬಾಲಕಿಯರ ಕಬಡ್ಡಿಯಲ್ಲಿ ಪ್ರಥಮ, ಬಾಲಕರ ಕಬಡ್ಡಿಯಲ್ಲಿ ಪ್ರಥಮ, ಬಾಲಕರ ಖೋ ಖೋದಲ್ಲಿ ಪ್ರಥಮ, ಬಾಲಕರ ವಾಲಾಬಾಲ್ ನಲ್ಲಿ ಪ್ರಥಮ, ಬಾಲಕರ ರಿಲೇ ಪ್ರಥಮ, ಬಾಲಕರ ಲಾಂಗ್ ಜಂಪ್ ನಲ್ಲಿ ಪ್ರಥಮ, ಬಾಲಕರ 100 ಮೀಟರ್ ಓಟದಲ್ಲಿ ದ್ವಿತೀಯ, ಬಾಲಕಿಯರ 200 ಮೀಟರ್ ಓಟದಲ್ಲಿ ದ್ವಿತೀಯ, ಬಾಲಕಿಯರ ರಿಲೇ ದ್ವಿತೀಯ, ಬಾಲಕರ ಶಾಟ್ ಪುಟ್ ತೃತೀಯ, ಬಾಲಕಿಯರ ಡಿಸ್ಕಸ್ ಥ್ರೋ ತೃತೀಯ, ಬಾಲಕರ ಲಾಂಗ್ ಜಂಪ್ ದ್ವಿತೀಯ ಸ್ಥಾನ ಬಂದಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net