ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು

u b banakar
Published on

ಹಿರೇಕೆರೂರ: ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೊಷಣೆ ಮಾಡಿದಂತೆ ತಾಲೂಕಿಗೆ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ತೆರೆಯಲು ಮಂಜೂರಾತಿ ದೊರೆತಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಮಕ್ಕಳನ್ನು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುನ್ನೆಲೆಗೆ ತರಲು 6ರಿಂದ 10ನೇ ತರಗತಿಯವರೆಗೆ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು ಮಾಡಲು ಸಿಎಂ ಆಯವ್ಯಯದ ಭಾಷಣದಲ್ಲಿ ಹೇಳಿದ್ದರು. ಆ ಪ್ರಕಾರ ತಾಲೂಕಿಗೆ ಸರ್ಕಾರ ಶಾಲೆಯನ್ನು ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೀಗಾಗಿ ಸೆ. 5ರಂದು ಪಟ್ಟಣದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಸದ್ಯಕ್ಕೆ ಶಾಲೆ ಆರಂಭಿಸಲಾಗುವುದು. ಶಾಲಾ ಕಟ್ಟಡಕ್ಕೆ 8 ಎಕರೆ ಜಾಗದ ಅವಶ್ಯಕತೆಯಿದ್ದು, ಅವಳಿ ತಾಲೂಕಿನ ತಹಸೀಲ್ದಾರ್​ಗೆ ಈಗಾಗಲೇ ಸೂಚನೆ ನೀಡಲಾಗಿದೆ. ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತರ ಮಕ್ಕಳ ನೋಂದಣಿಗೆ ಶೇ. 75 ಮೀಸಲು ಇದ್ದು, ಉಳಿದ ಶೇ. 25ರಷ್ಟು ಎಲ್ಲ ವರ್ಗದ ಮಕ್ಕಳಿಗೆ ಮೀಸಲು ಇಡಲಾಗಿದೆ ಎಂದರು.

ಪಪಂ ಅಧ್ಯಕ್ಷೆ ಸುಧಾ ಚಿಂದಿ, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಅಶೋಕ ಗದ್ದಿಗೌಡ್ರ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ ಎನ್.ಟಿ., ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಕಂಠಾಧರ ಅಂಗಡಿ, ಸನಾವುಲ್ಲಾ ಮಕಾಂದಾರ, ರಜಿಯಾ ಅಸದಿ, ಶಂಶಾದಾ ಕುಪ್ಪೇಲೂರ, ಕವಿತಾ ಹಾರ್ನಳ್ಳಿ, ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ರಮೇಶ ಮಡಿವಾಳರ, ಅಬ್ದುಲ್​ಖಾದರ್ ಲೋಹಾರ, ಮಹ್ಮದ್​ಹುಸೇನ್ ಖಾಜಿ, ಮಲ್ಲನಗೌಡ ಪುಟ್ಟಪ್ಪಗೌಡ್ರ, ನಿಂಗಪ್ಪ ಚಳಗೇರಿ, ಬಾಬುಸಾಬ್ ಜಡದಿ, ಶಫೀ ಗುಲಾಬ್ ಸಾಬ್, ಅಬ್ದುಲ್ ಅರಳೀಕಟ್ಟಿ, ನಿಜಾಮುದ್ದೀನ್, ಹುಸೇನ್ ಬ್ಯಾಡಗಿ, ಅಬ್ಬಾಸ್ ಗೋಡಿಹಾಳ, ಜಾಕೀರ ಮುಲ್ಲಾ, ಮಕ್ಬುಲ್ ಮುಲ್ಲಾ, ನಿಸಾರ್ ಬಾಳಂಬೀಡ ಇದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net