ಮನೆ ಬಾಡಿಗೆ ವಿನಾಯತಿ ನೀಡಲಿ

PROTEST
ಕನಕಗಿರಿ ಮುರಾರ್ಜಿ ದೇಸಾಯಿ ವಸತಿ ಶಾಲೆ(ಎಸ್ಸಿ) ಶಿಕ್ಷಕರು ನಾನಾ ಬೇಡಿಕೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು. ಪ್ರಾಚಾರ್ಯ ರಾಜು ಮಡ್ಡಿ, ಶಿಕ್ಷಕರಾದ ವೀರೇಶ ಎಂ, ಸುರೇಶ, ಬಾಬು, ಸುನಿಲ್ ಕುಮಾರ್, ಅಂಜನಪ್ಪ, ರೇವಣ ಸಿದ್ದಪ್ಪ, ನಾಗರಾಜ ಇತರರಿದ್ದರು.
Published on

ಕನಕಗಿರಿ: ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುರಾರ್ಜಿ ದೇಸಾಯಿ ವಸತಿ ಶಾಲೆ (ಎಸ್ಸಿ) ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಗುರುವಾರ ಕಾರ್ಯ ನಿರ್ವಹಿಸಿದರು.

ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನ ಗೊಳಿಸುವುದು, ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸುವುದು, ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ, ಖಾಯಂ ನೌಕರರಿಗೆ ಶೇ.10 ವಿಶೇಷ ಭತ್ಯೆ ಮಂಜೂರು ಮಾಡುವಂತೆ ಆಗ್ರಹಿಸಿದರು.

ಕಪ್ಪು ಪಟ್ಟಿ ಧರಿಸಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿದ್ದೇವೆ ಎಂದು ಪ್ರಾಚಾರ್ಯ ರಾಜು ಮಡ್ಡಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net