

ಮಡಿಕೇರಿ:
ಜಿಲ್ಲೆಯ ವಸತಿ ಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಕರ್ನಾಟಕ ವಸತಿ ಶಾಲೆಗಳ ಸಂಘ ಮತ್ತು ಸೋಮವಾರಪೇಟೆಯ ನಾವು ಪ್ರತಿಷ್ಠಾನದ ಸಹಯೋಗದಲ್ಲಿ ಎರಡು ದಿನದ ತರಬೇತಿ ಕಾರ್ಯಕ್ರಮ ಬುಧವಾರ ಮತ್ತು ಗುರುವಾರ ನಡೆಯಿತು.
ಕುಶಾಲನಗರ ಸಮೀಪದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಈ ತರಬೇತಿ ಕಾರ್ಯಕ್ರಮವನ್ನು ಬುಧವಾರ ಸಂವಿಧಾನ ಪ್ರಸ್ತಾವನೆ ಅನಾವರಣಗೊಳಿಸಿ ಉದ್ಘಾಟಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ಶ್ರೀದೇವಿ, ನಾವು ಪ್ರತಿಷ್ಠಾನ ಸಂಸ್ಥೆಯ ಸಂಸ್ಥಾಪಕ ಗೌತಮ್, ಜಿಲ್ಲಾ ಸಮನ್ವಯ ಅಧಿಕಾರಿ ಭಾರತಿ, ಶಾಲಾ ನಿಲಯ ಪಾಲಕಿ ಶಿಲ್ಪಾ ನಾಯಕ್, ತರಬೇತುದಾರಾದ ಸುಮನಾ ಕನ್ನಡ ಶಿಕ್ಷಕ ರಮೇಶ್, ಸಮಾಜ ವಿಜ್ಞಾನ ಶಿಕ್ಷಕ ಶಬರಿಗಿರೀಶ್, ಸಹನಾ ಇದ್ದರು.