

ಮುರಗೋಡ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸ್ಥಳಿಯ ಕರ್ನಾಟಕ ರಣಾ ವೇದಿಕೆ ಹಾಗೂ ವಿವಿಧ ಸಂಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ಸವದತ್ತಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು. ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಜನತೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಸ್ಥಳಿಯ ಕರವೇ ಅಧ್ಯ ಉದಯ ಚಿಕ್ಕಣ್ಣವರ ಮಾತನಾಡಿ, ಸವದತ್ತಿ ತಾಲೂಕಿನ ಮುರಗೋಡ ಪಟ್ಟಣವನ್ನು ಶ್ರೀದಲ್ಲಿ ತಾಲೂಕು ಕೇಂದ್ರವನ್ನಾಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಬೇಕು. ಮುರಗೋಡ ಸುತ್ತಲಿನ ಪ್ರವಾಸಿ ತಾಣಗಳ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ಮುರಗೋಡ ಬೆಲಹೊಂಗಲ ಮುಖ್ಯ ರಸ್ತೆ ಕಳಪೆ ಕಾಮಗಾರಿಯಿಂದ ಸಂಪೂರ್ಣ ಹದಗೆಟ್ಟಿದ್ದು, ಸರಿಪಡಿಸಬೇಕು. ಮುರಗೋಡ ಏತ ನೀರಾವರಿ ಕಾಮಗಾರಿ ಕಳಪೆಯಿಂದ ನೀರಾವರಿ ಸೌಲಭ್ಯ ಇಲ್ಲದಂತಾಗಿದ್ದು, ಇದರಿಂದ ಭೂಮಿ ಕಳೆದುಕೊಂಡ ರೆತರಿಗೆ ಪರಿಹಾರ ನೀಡಬೇಕು. ರೆತರ ಅನುಕೂಲಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭಿಸಬೇಕು. ಇಲ್ಲಿನ ಹೆಸ್ಕಾಂ ಶಕ್ತಿ 33 ಕೆವಿಯಿಂದ 110 ಕೆವಿಗೆ ಹೆಚ್ಚಿಸಬೇಕು. ಚರಂಡಿ ನಿರ್ಮಿಸಿ ಸುತ್ತಲಿನ ಸ್ವಚ್ಛತೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರಾದ ಸುರೇಶ ಮ್ಯಾಕಲ, ಮಹಾಂತೇಶ ಬಡಿಗೇರ, ಭೀಮಶಿ ಕಿವಡಿ ಮಾತನಾಡಿ, ಮುರಗೋಡ ಅಭಿವೃದ್ಧಿಗೆ ಈ ಭಾಗದ ಶಾಸಕ ಮಹಾಂತೇಶ ಕೌಜಲಗಿ ರ್ನಿಲಕ್ಷ$್ಯ ಹಾಗೂ ಇಲಾಖೆ ಅಧಿಕಾರಿಗಳೇ ಕಾರಣವೆಂದು ದೂರಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಎಲ್ಲ ಬೇಡಿಕೆಗಳನ್ನು ಸರ್ಕಾರ ಹಾಗೂ ಆಯಾ ಇಲಾಖೆ ಅಧಿಕಾರಿಗಳ ಗಮನಕ್ಕ ತಂದು ಸೂಕ್ತ ಪರಿಹಾರ ಮತ್ತು ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಮಹಾಂತ ಮಠದ ನೀಲಕಂಠ ಸ್ವಾಮಿಗಳು, ತಾಲೂಕು ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ಲೋಕೊಪಯೋಗಿ ಎಇಇ ಬಸವರಾಜ ಹಲಗಿ, ಹೆಸ್ಕಾಂ ಎಇಇ ಎಂ.ಎಸ್. ವಿಶಾಲಪುರಕರ, ಉಪತಸೀಲ್ದಾರ್ ಡಿ.ಬಿ. ಅಲ್ಲಯ್ಯನವರಮಠ, ಪಿಡಿಒ ಆರ್.ಎಲ್. ಬಾಗಿಲದ, ಪಿಎಸ್ಐ ಡಬ್ಲು.ಎಚ್. ಯಾದವಾಡ, ವಿವಿಧ ಇಲಾಖೆ ಅಧಿಕಾರಿಗಳು, ಕರವೇ ಮುಖಂಡರಾದ ಕಿರಣ ಸಂಪಗಾವಿ, ದೀಪಕ ಬಾಳಿಕಾಯಿ, ಗಿರೀಶ ಅಳಾಜ, ಬಸಯ್ಯ ಶಿಪ್ಪಯ್ಯನವರಮಠ, ಮಲ್ಲು ಮಲಕಾಜನವರ, ಸಂತೋಷ ಹಟ್ಟಹೊಳಿ, ಅರುಣ ಬಿಜ್ಜೂರ, ಮಹಾಂತೇಶ ದಡವಾಡ, ಮುತ್ತು ಚಿನ್ನನವರ ಇತರರಿದ್ದರು.