ಮೌಲ್ಯ ಕಳೆದುಕೊಳ್ಳುತ್ತಿವೆ ಗ್ರಾಮಸಭೆ, ಹಸಿರುವಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹಮೂರ್ತಿ ಬೇಸರ

photo tgl 1(29.2.2020) hasiruvalli gramasabhe
Published on

ತ್ಯಾಮಗೊಂಡ್ಲು: ಅಧಿಕಾರಿಗಳ ನಿರಾಸಕ್ತಿ ಮತ್ತು ಗೈರಿಗೆ ಕ್ರಮ ಕೈಗೊಳ್ಳದಿರುವುದರಿಂದ ಗ್ರಾಮಸಭೆ ಪ್ರಾಮುಖ್ಯತೆ ಕಳೆದುಕೊಳುತ್ತಿದೆ ಎಂದು ಹಸಿರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದರು.

ಹೋಬಳಿಯ ಹಸಿರುವಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡಿದರು.

ಗ್ರಾಮಸಭೆಯಲ್ಲಿ ವಾರ್ಷಿಕ ಕಾಮಗಾರಿ ಪಟ್ಟಿಯನ್ನು ತಯಾರಿಸಿ ಅನುಮೋದನೆ ಪಡೆದುಕೊಳ್ಳಬೇಕು. ಆದರೆ ಅಧಿಕಾರಿಗಳೇ ಇಲ್ಲದ ಮೇಲೆ ಏನು ಮಾಡಬೇಕು, ಬೇಸಿಗೆ ಪ್ರಾರಂಭವಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸಭೆ ಬಗ್ಗೆ ತಿಳಿಸಿದ್ದರೂ ನಿರ್ಲಕ್ಷಿಸಿದ್ದಾರೆ. ನೋಡಲ್ ಅಧಿಕಾರಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಬೆಸ್ಕಾಂ ಇಲಾಖೆ ಅಭಿಯಂತ ಪ್ರಕಾಶ್ ಮಾತನಾಡಿ, ಬೆಸ್ಕಾಂನಲ್ಲಿ ನೋಂದಾಯಿಸಿಕೊಂಡು ಆರ್‌ಆರ್ ನಂಬರ್ ಪಡೆದ ರೈತರಿಗೆ 10 ಅಶ್ವಶಕ್ತಿವರೆಗೂ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಕೆಲವರು ಅದಕ್ಕಿಂತ ಹೆಚ್ಚಿನ ಶಕ್ತಿಯ ಪಂಪ್ ಮೋಟಾರ್ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸರಬರಾಜು ಮತ್ತು ಉಪಯೋಗದ ಬಗ್ಗೆ ಇಲಾಖೆಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅಂತಹವರನ್ನು ಗುರುತಿಸಿ ದಂಡ ವಿಧಿಸಲು ನಮಗೆ ಆದೇಶ ಬಂದಿದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಪುರುಷೋತ್ತಮಗೌಡ ಮಾತನಾಡಿ, ಈಗ ನೀಡುತ್ತಿರುವ ವಿದ್ಯುತ್ ಸಾಮರ್ಥ್ಯಮಟ್ಟವನ್ನು ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಗ್ರಾಪಂತಿ ಸದಸ್ಯ ಕೆ.ಸಿದ್ದರಾಜಯ್ಯ ಮಾತನಾಡಿ, ಚಿಕ್ಕನಹಳ್ಳಿ ಸರ್ಕಾರಿ ಶಾಲೆಯ ಕಾಂಪೌಂಡ್ ಒಳಗೆ ವಿದ್ಯುತ್ ತಂತಿ ಹಾದುಹೋಗಿರುವುದನ್ನು ಸ್ಥಳಾಂತರಿಸಬೇಕು. ಜೋತು ಬಿದ್ದ ತಂತಿಗಳನ್ನು ದುರಸ್ತಿ ಮಾಡಬೇಕು ಎಂದರು.

ಕೃಷಿ ಇಲಾಖೆಯ ಎಇ ಎಚ್.ಶಿವಕುಮಾರ್, ಕೆ.ಪ್ರಭು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸುಜಾತಾ, ನೋಡಲ್ ಅಧಿಕಾರಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಮೃತಾ, ಪಶುವೈದ್ಯ ಇಲಾಖೆ ಸಹಾಯಕ ಹನುಮಂತಕುಮಾರ್, ಗ್ರಾಪಂ ಉಪಾಧ್ಯಕ್ಷೆ ಎಚ್.ರೇಣುಕಮ್ಮ, ಸದಸ್ಯರಾದ ಹಸಿರುವಳ್ಳಿ ಉಮಾ, ವಾದಕುಂಟೆ ಅಶ್ವತ್ಥಯ್ಯ, ಎಂ.ಧನಲಕ್ಷ್ಮೀ, ಕೆ.ಜಯಮ್ಮ, ಎಚ್.ರೇಖಾ, ಕೆ.ಜಯಮ್ಮ, ಕಾರ್ಯದರ್ಶಿ ಕೆಂಪರಂಗಯ್ಯ ಇತರರು ಇದ್ದರು.

ಗ್ರಾಮಸಭೆಯನ್ನು ಸಾರ್ವಜನಿಕರು ಹಬ್ಬದ ರೀತಿ ಆಚರಿಸಬೇಕು. ಗ್ರಾಮಸ್ಥರು ಸಮಸ್ಯೆ ತಿಳಿಸಿ ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಸಮಸ್ಯೆ ಅರಿವಾಗುವುದಿಲ್ಲ. ಈ ವರ್ಷದಲ್ಲಿ ಗ್ರಾಪಂನಿಂದ ಶೂನ್ಯ ಪ್ಲಾಸ್ಟಿಕ್ ಬಳಕೆ, ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನೀರಿನ ಬಳಕೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುವುದು. ರೇವತಿ, ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net