ಮುಂಜನಹಳ್ಳಿ ಮಹಾದೇವ್‌ಗೆ ವಾಲ್ಮೀಕಿ ಸಂಘದಿಂದ ಸನ್ಮಾನ

IMG-20240820-WA0159_1
Published on

ಸಾಲಿಗ್ರಾಮ: ಯಾವುದೇ ಒಂದು ಪಕ್ಷದಲ್ಲಿ ಕಾರ್ಯಕರ್ತರು ನಿಷ್ಠಾವಂತರಾಗಿ ಕೆಲಸ ಮಾಡಿದರೆ ಆ ಪಕ್ಷ ಅವರನ್ನ ಗುರುತಿಸಿ ಉನ್ನತ ಹುದ್ದೆಗಳನ್ನು ನೀಡುತ್ತದೆ ಎಂಬುದಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಮುಂಜನಹಳ್ಳಿ ಮಹಾದೇವ್ ಉದಾರಣೆಯಾಗಿದ್ದಾರೆ ಎಂದು ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಸಿ.ಸಿ.ಮಹಾದೇವ್ ತಿಳಿಸಿದರು.


ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿಯ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಮುಂಜನಹಳ್ಳಿ ಮಹಾದೇವ್ ಅವರನ್ನು ಸಂಘದ ಸದಸ್ಯರೊಂದಿಗೆ ಮುಂಜನಹಳ್ಳಿ ಗ್ರಾಮದಲ್ಲಿ ಸೋಮವಾರ ಅಭಿನಂದಿಸಿ ಮಾತನಾಡಿದರು. ತಾಲೂಕು ಮಹರ್ಷಿ ವಾಲ್ಮೀಕಿ ಸಂಘ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡಲ್ಲ. ಯಾವುದೇ ಪಕ್ಷದಲ್ಲಿ ಸಂಘದ ಸದಸ್ಯರು ಗುರುತಿಸಿಕೊಂಡು ಉನ್ನತ ಹುದ್ದೆಗಳನ್ನು ಪಡೆದರೆ ಅವರನ್ನು ಪಕ್ಷಾತೀತವಾಗಿ ಗೌರವಿಸುವುದು ನಮ್ಮ ಜವಾಬ್ದಾರಿ ಎಂದರು.


ಯಾವುದೇ ಪಕ್ಷದಲ್ಲಿ ರಾಜಕೀಯವಾಗಿ ಉನ್ನತ ಮಟ್ಟಕ್ಕೆ ಬೆಳೆಯುವ ಎಲ್ಲ ಸದಸ್ಯರನ್ನು ಪಕ್ಷಾತೀತವಾಗಿ ಸಂಘದ ಸದಸ್ಯರು ಗೌರವಿಸುತ್ತೇವೆ. ಹಾಗಾಗಿ ಮುಂಜನಹಳ್ಳಿ ಮಹಾದೇವ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಗ್ಯಾರಂಟಿ ಸಮಿತಿಗಳ ತಾಲೂಕು ಸದಸ್ಯರಾಗಿ ಆಯ್ಕೆ ಆಗಿರುವುದರಿಂದ ಅವರನ್ನು ಅಭಿನಂದಿಸಲಾಗುತ್ತಿದೆ ಎಂದರು.


ಸಾಲಿಗ್ರಾಮ ನೂತನ ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ಮತ್ತು ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರದಂತೆ ಮಹದೇವ್ ಅವರ ಸಹಕಾರವು ಇರಲಿ. ಅದೇ ರೀತಿ ಇನ್ನಷ್ಟು ದಾನಿಗಳನ್ನು ಸಂಘದ ಸಹಾಯಕ್ಕೆ ನೆರವು ನೀಡುವಂತೆ ಮಾಡುವ ಮೂಲಕ ಸಂಘದ ಷೇರುದಾರರನ್ನು ಹೆಚ್ಚು ಮಾಡುವಲ್ಲಿ ಸಹಕಾರ ನೀಡಲಿ ಎಂದರು.


ಸಂಘದ ಖಜಾಂಚಿ ಸಂತೋಷ್, ಸಹ ಕಾರ್ಯದರ್ಶಿ ಬೈರೇಶ್, ಸಂಘಟನಾ ಕಾರ್ಯದರ್ಶಿ ಕುಮಾರ್, ಸದಸ್ಯರಾದ ಮಲ್ಲಿಕಾರ್ಜುನ್, ದಿನೇಶ್, ಕುಬೇರ, ಫೈನಾನ್ಸ್ ಮಹದೇವನಾಯಕ, ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net