ಶೇ.3ರಷ್ಟು ಕಂದಾಯ ಹೆಚ್ಚಿಸಲು ತೀರ್ಮಾನ

9 HNL
Published on

ಹೊನ್ನಾಳಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಮೈಲಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ ಹಿಂದಿನ ಸಭಾ ನಡವಳಿಕೆ ಹಾಗೂ ಸರ್ಕಾರದಿಂದ ಬಂದ ಸುತ್ತೋಲೆಗಳನ್ನು ಓದಿ ದಾಖಲು ಮಾಡಿದ ನಂತರ ಫೆಬ್ರವರಿ ಮಾಹೆ ವರೆಗಿನ ಜಮಾ- ಖರ್ಚುಗಳನ್ನು ಮಂಡಿಸಿ ದಾಖಲು ಮಾಡಲಾಯಿತು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳಿಗೆ ಸರ್ಕಾರದ ನಿರ್ದೇಶನದಂತೆ 2025-26 ನೇ ಸಾಲಿಗೆ ಕಂದಾಯಗಳನ್ನು ಪರಿಷ್ಕರಿಸುವ ಬಗ್ಗೆ ರ್ಚಚಿಸಿ ಸದಸ್ಯರ ಅಭಿಪ್ರಾಯದಂತೆ ಶೇ.3 ರಷ್ಟು ಕಂದಾಯ ಹೆಚ್ಚಿಸಲು ತೀರ್ವನಿಸಲಾಯಿತು.

ನೀರು ಸರಬರಾಜು ಹಾಗೂ ಆರೋಗ್ಯ ಇಲಾಖೆ ವಿಭಾಗದಿಂದ ಅನುಪಯುಕ್ತ ವಸ್ತುಗಳನ್ನು ಹರಾಜು, ಕೆಯುಡಬ್ಲ್ಯೂಎಸ್ ನಿಗಮದಿಂದ ಪ್ರೊರೇಟ್ ಶುಲ್ಕವನ್ನು ನಿಗದಿ ಹೀಗೆ ಸುಮಾರು 22 ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಸ್ಥಳೀಯ ಪತ್ರಕರ್ತರಿಗೆ ಲ್ಯಾಪ್​ಟಾಪ್ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಾಧಿಕಾರಿ ಟಿ. ಲೀಲಾವತಿ ತಿಳಿಸಿದರು.

ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ, ಪುರಸಭಾ ಸದಸ್ಯರಾದ ರಾಜೇಂದ್ರ, ತನ್ವಿರ್,ಧರ್ಮಪ್ಪ, ಸುಮಾ ಸತೀಶ್, ಪದ್ಮಾ ಪ್ರಶಾಂತ್, ಅನುಶಂಕರ್ ಗುಂಡ, ನಾಮಿನಿ ಸದಸ್ಯರಾದ ರವಿ, ಮಾದಪ್ಪ, ಚಂದ್ರಪ್ಪ ಹಾಗೂ ಇತರರು ಇದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷ ಆಯ್ಕೆ: ಪುರಸಭೆಯಲ್ಲಿ ಸ್ಥಾಯಿ ಸಮಿತಿ ರಚಿಸುವ ಬಗ್ಗೆ ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ ಅವ ರ ಅರ್ಜಿಯ ಬಗ್ಗೆ ರ್ಚಚಿಸಿ ಹಾಜರಿದ್ದ ಸದಸ್ಯರ ಒಪ್ಪಿಗೆಯಂತೆ ಪುರಸಭೆ ಸದಸ್ಯ ಸುರೇಶ್ ಹೊಸಕೇರಿ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸದಸ್ಯರು, ಮುಖಂಡರು, ಪುರಸಭೆ ಅಧಿಕಾರಿಗಳು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net