ನಗರಸಭೆ ಜಾಗದಲ್ಲಿ ನಿರ್ವಿುಸಿದ್ದ ಶೆಡ್ ತೆರವು

8 sgr 4
Published on

ಸಾಗರ: ನಗರಸಭೆ ವ್ಯಾಪ್ತಿಯ ಅಣಲೆಕೊಪ್ಪದಲ್ಲಿ ಪೌರಾಯುಕ್ತ ಎಚ್.ಕೆ.ನಾಗಪ್ಪ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ಸರ್ವೆ ನಂ.8ರಲ್ಲಿ ಒಂದು ಎಕರೆ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ನಿರ್ವಿುಸಿದ್ದ ಶೆಡ್ ತೆರವುಗೊಳಿಸಿ ಅದನ್ನು ನಗರಸಭೆ ವಶಕ್ಕೆ ಪಡೆಯಲಾಯಿತು. ವಶಪಡಿಸಿಕೊಂಡ ಜಾಗಕ್ಕೆ ನಗರಸಭೆಗೆ ಕಾಯ್ದಿರಿಸಿದ ಜಾಗ ಎಂದು ನಾಮಫಲಕ ಅಳವಡಿಸಲಾಯಿತು. ಕಂದಾಯ ಅಧಿಕಾರಿ ಸಂತೋಷ ಕುಮಾರ್, ಕಂದಾಯ ವಿಭಾಗದ ಮಂಜುನಾಥ ಗೌಡ, ಹರೀಶ್, ಶ್ರೀನಿವಾಸ್, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net