

ಸಂಡೂರು: ಪುರಸಭೆ ಮುಖ್ಯಾಧಿಕಾರಿ ಕೆ.ಜಯಣ್ಣ ಅವರು ಪಟ್ಟಣದಲ್ಲಿ ಯಾವೊಂದೂ ಕೆಲಸಗಳನ್ನು ಸಮರ್ಪಕ ನಡೆಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ತಹಸೀಲ್ದಾರ್ ಜೆ.ಅನಿಲ್ ಕುಮಾರ್‌ಗೆ ಗುರುವಾರ ಮನವಿ ಸಲ್ಲಿಸಿದರು.
ಒಂದು ವರ್ಷದಿಂದ ಸಾಮಾನ್ಯ ಸಭೆ ನಡೆಸಿಲ್ಲ. ಕಾಲರಾ, ಮಲೇರಿಯಾ, ಡೆಂೆ ಜ್ವರ ಹೆಚ್ಚಾಗಿದ್ದರೂ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಲ್ಲ. ಬಿಜೆಪಿ ಸದಸ್ಯರು, ಅಧ್ಯಕ್ಷರನ್ನು ಆಹ್ವಾನಿಸಿ ವಿಶ್ವ ಪರಿಸರ ದಿನಾಚರಣೆ ಮಾಡಿದ್ದಾರೆ. ಕಾಂಗ್ರೆಸ್ ಸದಸ್ಯರು ಇವರಿಗೆ ಬೇಡವೇ ಎಂದು ಕಿಡಿಕಾರಿದರು.
ಈ ಹಿಂದೆ 13-14ನೇ ವಾರ್ಡ್‌ನಲ್ಲಿ ಸಭೆ ಮಾಡಿದಾಗಲೂ ನಮ್ಮನ್ನು ಕರೆಯಲಿಲ್ಲ. ಪರಿಸರ ಇಂಜಿನಿಯರ್ ಅನ್ನಪೂರ್ಣಾ ಅವರನ್ನು ವರ್ಗಾವಣೆ ಮಾಡಬೇಕು. ಗುಮಾಸ್ತ ಹನುಮಂತಪ್ಪ ಅವರನ್ನು ಮುಖ್ಯಾಧಿಕಾರಿ ಹೊಡೆದಿದ್ದಾರೆ. ಬಜೆಟ್ ಸಭೆ ಕರೆದಿಲ್ಲ. ಎಸಿ ಅವರು ಒಂದೂ ದಿನ ಇಲ್ಲಿಗೆ ಬಂದಿಲ್ಲ. ಆಸ್ತಿ ನೋಂದಣಿಗಳನ್ನು ಮಾಡಲು ಮೂರು ವರ್ಷದಿಂದ 15 ವರ್ಷಗಳ ಹಳೆಯ ದಾಖಲೆಗಳನ್ನು ಕೇಳಲಾಗುತ್ತಿದ್ದು, ಸಾರ್ವಜನಿಕರು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ಮಾಜಿ ಅಧ್ಯಕ್ಷರಾದ ಅನಿತಾ ವಸಂತಕುಮಾರ್, ಎಲ್.ಎಚ್.ಶಿವಕುಮಾರ್, ಮಾಜಿ ಉಪಾಧ್ಯಕ್ಷ ಈರೇಶ್ ಸಿಂದೆ, ಸದಸ್ಯರಾದ ಕೆ.ವಿ.ಸುರೇಶ್, ಎ.ಪಂಪಾಪತಿ, ಬ್ರಹ್ಮಯ್ಯ, ಸಂತೋಷ್, ಸಿ.ಅಶೋಕ್, ಹನುಮೇಶ್, ಎಸ್.ಸಿರಾಜ್, ಉಜ್ಜಪ್ಪ ಇದ್ದರು.