ಸಚಿವ ಸುಧಾಕರ್ ಏಳಿಗೆ ತಡೆಯಲು ಪಿತೂರಿ

dj clk sudhakar
Published on

ಚಳ್ಳಕೆರೆ: ಅಲ್ಪ ಸಂಖ್ಯಾತ ಸಮುದಾಯದ ಸಚಿವ ಡಿ. ಸುಧಾಕರ್ ಅವರ ರಾಜಕೀಯ ಏಳಿಗೆ ಸಹಿಸಲಾಗದೆ, 10 ವರ್ಷಗಳ ಹಿಂದೆ ಯಲಹಂಕದಲ್ಲಿ ನಡೆದಿದ್ದ ಹಳೆಯ ವ್ಯವಹಾರವನ್ನು ಪ್ರಸ್ತುತ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಜೆ. ವೆಂಕಟೇಶ್ ಆರೋಪಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಧಾಕರ್ ಅವರ ಮೇಲೆ ಭೂ ಕಬಳಿಕೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗುವಲ್ಲಿ ಕಾಣದ ಕೈಗಳಿವೆ.

ಇದು ರಾಜಕೀಯ ಷಡ್ಯಂತ್ರವಾಗಿದೆ. ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಲು ಸೂಚಿಸುವ ಮೂಲಕ ಸುಧಾಕರ್ ಮೇಲೆ ದೂರು ದಾಖಲು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಮಾತನಾಡಿ, ಡಿ.ಸುಧಾಕರ್ ಅಲ್ಪ ಸಂಖ್ಯಾತ ಸಮುದಾಯ ದವರಾಗಿದ್ದರೂ ಇತರರನ್ನು ಪ್ರೀತಿ, ಗೌರವದಿಂದ ಕಾಣುವ ವ್ಯಕ್ತಿ.

ಅವರ ಸಹಕಾರ ಮತ್ತು ಪ್ರೋತ್ಸಾಹದಿಂದ ಕೆಲ ವರ್ಗದ ಮುಖಂಡರು ರಾಜಕೀಯ ಭವಿಷ್ಯ ಕಂಡುಕೊಂಡಿದ್ದಾರೆ ಎಂದರು.

ಕಾನೂನು ಬದ್ದವಾಗಿ ಯಲಹಂಕದಲ್ಲಿನ ಭೂಮಿ ಖರೀದಿ ಮತ್ತು ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದಾರೆ. ರಾಜಕೀಯ ದುರುದ್ದೇಶದಿಂದ ಸುಧಾಕರ್ ಮೇಲೆ ದೂರು ದಾಖಲಿಸಲಾಗಿದೆ ಎಂದು ದೂರಿದರು.

ಗ್ರಾಪಂ ಅಧ್ಯಕ್ಷ ಬಿ.ಆನಂದ್‌ಕುಮಾರ್, ಪುರಸಭೆ ಮಾಜಿ ಸದಸ್ಯ ಎಂ. ಚೇತನ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮೀರಸಾಬಿಹಳ್ಳಿ ಮೋಹನ್, ಖಮ್ರುಜ್, ಓಬಳೇಶ್, ಚನ್ನಾಗನಹಳ್ಳಿ ರುದ್ರಮುನಿ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net