ವಾಣಿಜ್ಯ ಮಳಿಗೆಗಳ ಬಾಡಿಗೆ ದರ ಪರಿಷ್ಕರಿಸಿ

MANAVI
ಲಿಂಗಸುಗೂರು ಪುರಸಭೆ ಲೆಕ್ಕಾಧಿಕಾರಿ ಶಿವಲಿಂಗ ಮೇಗಳಮನಿಗೆ ನಮ್ಮ ಕರವೇ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ತಿಮ್ಮಾರಡ್ಡಿ ಮುನ್ನೂರು, ರಮೇಶ ಗುತ್ತೇದಾರ, ಮೌನೇಶ ರಡ್ಡಿ, ರವಿ ಗೊರೇಬಾಳ, ಸಚಿನ್, ಪ್ರವೀಣ, ಶ್ರೀನಿವಾಸ, ತುಕಾರಾಮ್, ಸಂತೋಷ್, ಅಬ್ಬಾಸಲಿ ಇದ್ದರು.
Published on

ಲಿಂಗಸುಗೂರು: ಪುರಸಭೆಯಿಂದ ಪಟ್ಟಣದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ದರ ಪರಿಷ್ಕರಣೆಗೆ ರೀ-ಟೆಂಡರ್ ಕರೆಯಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪುರಸಭೆ ಲೆಕ್ಕಾಧಿಕಾರಿ ಶಿವಲಿಂಗ ಮೇಗಳಮನಿಗೆ ಬುಧವಾರ ಮನವಿ ಸಲ್ಲಿಸಿದರು.

ದಶಕಗಳ ಹಿಂದೆ ಹಳೆಯ ಬಸ್ ನಿಲ್ದಾಣ, ಬೈಪಾಸ್ ರಸ್ತೆ ಹತ್ತಿರ ಐಡಿಎಸ್‌ಎಂಟಿ ಯೋಜನೆಯಡಿ ಪುರಸಭೆಯಿಂದ 35, ಎಸ್‌ಎಫ್‌ಸಿ ಯೋಜನೆಯಡಿ 12 ಹಾಗೂ ಪುರಸಭೆ ನಿಧಿಯಡಿ 5 ಮಳಿಗೆ ಸೇರಿ ಒಟ್ಟು 52 ವಾಣಿಜ್ಯ ಮಳಿಗೆಗಳಿಗೆ ಅಂದಿನ ದರದ ಕನಿಷ್ಠ 2 ರಿಂದ 4 ಸಾವಿರ ರೂ. ಬಾಡಿಗೆ ನಿಗದಿ ಪಡಿಸಲಾಗಿತ್ತು.

ಅಂದಿನಿಂದ ಈವರೆಗೂ ಅದೇ ದರ ಮುಂದುವರಿಸಲಾಗಿದೆ. ಬಹುತೇಕ ಮಳಿಗೆಗಳನ್ನು ಪಡೆದವರು ಬೇರೆಯವರಿಗೆ ಹೆಚ್ಚಿನ ದರಕ್ಕೆ ಬಾಡಿಗೆ ನೀಡಿದ್ದಾರೆ. ಆದರೂ ಪುರಸಭೆ ಅಧಿಕಾರಿಗಳು ದರ ಪರಿಷ್ಕರಣೆ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಕೂಡಲೇ ವಾಣಿಜ್ಯ ಮಳಿಗೆಗಳ ಹರಾಜಿಗೆ ರೀ-ಟೆಂಡರ್ ಕರೆದು ಸರ್ಕಾರದ ನಿಯಮಾನುಸಾರ ಬಾಡಿಗೆ ನಿಗದಿ ಪಡಿಸಬೇಕು. ಇಲ್ಲದಿದ್ದರೆ ಧರಣಿ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸಂಘಟನೆ ತಾಲೂಕು ಅಧ್ಯಕ್ಷ ತಿಮ್ಮಾರಡ್ಡಿ ಮುನ್ನೂರು, ರಮೇಶ ಗುತ್ತೇದಾರ, ಮೌನೇಶ ರಡ್ಡಿ, ರವಿ ಗೊರೇಬಾಳ, ಸಚಿನ್, ಪ್ರವೀಣ, ಶ್ರೀನಿವಾಸ, ತುಕಾರಾಮ್, ಸಂತೋಷ್, ಅಬ್ಬಾಸಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net