ಪುರಸಭೆ ಅಧ್ಯಕ್ಷೆ ಜಗದೇವಿ, ಉಪಾಧ್ಯಕ್ಷ ಅಶೋಕ

bbgd aayke
ಬಸವನಬಾಗೇವಾಡಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾದ ಜಗದೇವಿ ಗುಂಡಳ್ಳಿ ಹಾಗೂ ಅಶೋಕ ಹಾರವಾಳ ಅವರನ್ನು ಸನ್ಮಾನಿಸಲಾಯಿತು.
Published on

ಬಸವನಬಾಗೇವಾಡಿ: ಪಟ್ಟಣದ ಪುರಸಭೆಗೆ ನೂತನ ಅಧ್ಯಕ್ಷರಾಗಿ ಜಗದೇವಿ ಮುತ್ತಪ್ಪ ಗುಂಡಳ್ಳಿ, ಉಪಾಧ್ಯಕ್ಷರಾಗಿ ಅಶೋಕ ಮಲ್ಲಿಕಾರ್ಜುನ ಹಾರಿವಾಳ ಆಯ್ಕೆಯಾಗಿದ್ದಾರೆ.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ನಡೆಯಿತು.

ಪುರಸಭೆ 23 ಸದಸ್ಯರ ಬಲ ಹೊಂದಿದ್ದು, 12 ಕಾಂಗ್ರೆಸ್ ಸದಸ್ಯರು, 6 ಬಿಜೆಪಿ ಸದಸ್ಯರು ಹಾಗೂ 5 ಜನ ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ(ಅ) ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಜಗದೇವಿ ಮುತ್ತಪ್ಪ ಗುಂಡಳ್ಳಿ ಒಬ್ಬರೇ ನಾಮಪತ್ರ ಸಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಅಶೋಕ ಮಲ್ಲಿಕಾರ್ಜುನ ಹಾರಿವಾಳ, ಬಿಜೆಪಿಯ ಅಶೋಕ ಸಂಪನ್ನವರ, ಮತ್ತು ನಜೀರ್ ಅಹ್ಮದ ಗಣಿ ನಾಮಪತ್ರ ಸಲ್ಲಿಸಿದ್ದರು. ನಜೀರ್ ಅಹ್ಮದ್ ಗಣಿ ಅವರು ನಾಮಪತ್ರ ವಾಪಸ್ ಪಡೆದುಕೊಂಡರು.

ಅಶೋಕ ಹಾರಿವಾಳ ಹಾಗೂ ಬಿಜೆಪಿ ಸದಸ್ಯಅಶೋಕ ಸಂಪನ್ನವರ್(ಗುಳೇದ್) ಮಧ್ಯ ಚುನಾವಣೆ ನಡೆಯಿತು. ಅಶೋಕ ಹಾರಿವಾಳ 19 ಮತಗಳು ಪಡೆದರು. ಅಶೋಕ ಸಂಪನ್ನವರ್ ಅವರಿಗೆ 3 ಮತಗಳು ಲಭಿಸಿದವು.

ಚುನಾವಣೆ ಪ್ರಕ್ರಿಯೆಯಲ್ಲಿ 22 ಸದಸ್ಯರು ಭಾಗವಹಿಸಿದ್ದರು. ಓರ್ವ ಸದಸ್ಯ ಗೈರಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಇನ್ನೋರ್ವ ಸದಸ್ಯ ತಟಸ್ಥಾಗಿ ಉಳಿದುಕೊಂಡಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಶೋಕ ಹಾರಿವಾಳ ಅವರಿಗೆ ಸಚಿವ ಶಿವಾನಂದ ಪಾಟೀಲ ಸೇರಿ ಒಟ್ಟು 19 ಸದಸ್ಯರು ಮತ ಚಲಾಯಿಸಿದರು ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ತಿಳಿಸಿದ್ದಾರೆ.

ಬಿಜೆಪಿ ಸದಸ್ಯರಿಂದ ಕಾಂಗ್ರೆಸ್‌ಗೆ ಮತ: ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ 6 ಜನ ಸದಸ್ಯರಲ್ಲಿ ಮೂವರು ಬಿಜೆಪಿ ಅಭ್ಯರ್ಥಿ ಪರ ಮತಚಲಾಯಿಸಿದರು. ಇನ್ನು ಮೂವರ ಪೈಕಿ ಒಬ್ಬರು ತಟಸ್ಥರಾಗಿದ್ದರು. ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಓರ್ವ ಸದಸ್ಯ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net