ಪುರಸಭೆ ಸಾಮಾನ್ಯ ಸಭೆ ಮುಂದಕ್ಕೆ

20 SANDOOR 03
ಸಂಡೂರು ಪುರಸಭೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯನ್ನು ಅಧ್ಯಕ್ಷ ಸಿರಾಜ್ ಹುಸೇನ್ ಮುಂದೂಡಿದರು. ಉಪಾಧ್ಯಕ್ಷೆ ಎಂ.ಸಿ.ಲತಾ ಉಜ್ಜಪ್ಪ, ಮುಖ್ಯಾಧಿಕಾರಿ ಕೆ.ಜಯಣ್ಣ ಇದ್ದರು.
Published on

ಸಂಡೂರು: ಪುರಸಭೆ ಸಾಮಾನ್ಯ ಸಭೆ ಸಮಯಕ್ಕೆ ಸರಿಯಾಗಿ ನಡೆಯದಿದ್ದರಿಂದ ಬೇಸರಗೊಂಡ ಪ್ರತಿಪಕ್ಷ ಬಿಜೆಪಿ ಸದಸ್ಯರು ಹೊರನಡೆದರು. ಸಭೆಯಲ್ಲಿ ಆಸ್ತಿ ದಾಖಲೆಗೆ ಾರ್ಮ-3 ವಿಳಂಬದ ಬಗ್ಗೆ, ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿತ್ತು.

ಅಧ್ಯಕ್ಷರು-ಉಪಾಧ್ಯಕ್ಷರು ಸೇರಿ ಸದಸ್ಯರಾರು ಬಾರದಿದ್ದರಿಂದ ಸಭೆಯನ್ನು ತ್ಯಜಿಸಿರುವುದಾಗಿ ಬಿಜೆಪಿ ಸದಸ್ಯರು ತಿಳಿಸಿರು. ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್ ಮಾತನಾಡಿ, ಸದಸ್ಯರೆಲ್ಲಾ ಕಾರ್ಯಕ್ರಮಕ್ಕೆ ಹೋಗಿದ್ದೆವು.

ಸ್ವಲ್ಪ ತಡವಾಗಿದ್ದರಿಂದ ಪ್ರತಿಪಕ್ಷ ಸದಸ್ಯರು ಎದ್ದು ಹೋಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಸಭೆ ನಡೆಸುವುದಾಗಿ ತಿಳಿಸಿದರು. ಸದಸ್ಯರಾದ ಎಲ್.ಎಚ್.ಶಿವಕುಮಾರ್, ವೀರೇಶ ಸಿಂದೆ, ಹನುಮೇಶ, ಸಿ.ಕೆ.ಅಶೋಕ, ವತ್ಸಲ, ಸಂತೋಷ ಜಾದವ್, ಜೆಇ ಅನಿಲ ಕುಮಾರ್, ಬಿಜೆಪಿ ಸದಸ್ಯರಾದ ಅಬ್ದುಲ್ ಮುನಾಫ್, ಮಾಳಿಗಿ ರಾಮಣ್ಣ, ದುರುಗಮ್ಮ ರಮೇಶ, ಲಕ್ಷ್ಮಿದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net