ಪುರಸಭೆ ಸಾಮನ್ಯ ಸಭೆ

Municipal General Meeting
ಮಹಾಲಿಂಗಪುರ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.ಪುರಸಭೆ ಮುಖ್ಯಾಕಾರಿ ಈರಣ್ಣ ದಡ್ಡಿ,ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ,ಅಬ್ದುಲರಜಾಕ ಬಾಗವಾನ ಇದ್ದರು.
Published on

ಮಹಾಲಿಂಗಪುರ: ಸ್ಥಳೀಯ ಪುರಸಭೆ ಸಭಾಭವನದಲ್ಲಿ ಪುರಸಭೆ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.

ಈ ಸಂದರ್ಭದಲ್ಲಿ 15 ನೇ ಹಣಕಾಸು,ರಾಜ್ಯ ಹಣಕಾಸು ಹಾಗೂ ಪುರಸಭೆ ನಿ ಅಡಿ ತಯಾರಿಸಲಾದ ಕ್ರಿಯಾ ಯೋಜನೆಗಳನ್ನು ಚರ್ಚಿಸಲಾಯಿತಲ್ಲದೆ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯರಾದ ಶೇಖರ ಅಂಗಡಿ,ಚನಬಸು ಯರಗಟ್ಟಿ ಹಾಗೂ ಸವಿತಾ ಹುರಕಡ್ಲಿ ಪಟ್ಟಣದ ಪಾಂಡುರಂಗ ಮಂದಿರದ ಹತ್ತಿರ ಬೋರ ವೆಲ್ ಅಗೆದು ನೀರಿನ ವ್ಯವಸ್ಥೆ ಮಾಡುವದು,ಬಸವನಗರದಲ್ಲಿ ಗಟಾರ ಸಮಸ್ಯ ಕುರಿತು ಅಧ್ಯಕ್ಷರ ಗಮನ ಸೆಳೆದರು.

ಪುರಸಭೆ ನಾಮನಿರ್ದೇಶಿತ ಸದಸ್ಯ ಬಸವರಾಜ ಕರೆಹೊನ್ನ ಮಾತನಾಡಿ ಎಪಿಎಂಸಿ ರಸ್ತೆಯಲ್ಲಿ ನೂತನವಾಗಿ ಅಳವಡಿಸಲಾದ ವಿದ್ಯುತ್‌ದೀಪಗಳನ್ನು ತಡವಾಗಿ ಅಂದರೆ ರಾತ್ರಿ ಹೊತ್ತಿನಲ್ಲಿ ಉರಿಸಲಾಗುತ್ತಿದೆ.ಇದರಿಂದ ಅಲ್ಲಿಯ ಸಂಚಾರಿಗಳು ಕತ್ತಲೆಯಲ್ಲಿ ರಸ್ತೆ ಮೇಲೆ ಸಂಚರಿಸುತ್ತಿದ್ದಾರೆ.ಕಾರಣ ಕತ್ತಲು ಕವಿಯುವ ಮುನ್ನ ದೀಪಗಳನ್ನು ಬೆಳಗಿಸಬೇಕು ಮತ್ತು ಬಸವೇಶ್ವರ ವತ್ತ ಹಾಗೂ ರಾಣಿ ಚನ್ನಮ್ಮ ವತ್ತದಲ್ಲಿ ಸಂಚರಿಸುವವರು ಹಾಗೂ ವಾಹನ ಸವಾರರು ರಸ್ತೆ ನಿಯಮ ಪಾಲಿಸದೆ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದು ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದರು.

ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ,ರವಿ ಜವಳಗಿ,ರಾಜು ಚಮಕೇರಿ ಮುಂತಾದವರು ಮಾತನಾಡಿ ಪುರಸಭೆ ಆರೋಗ್ಯ ವಿಭಾಗದಲ್ಲಿ ಸಿಬ್ಬಂದಿಯ ಕೊರತೆಯಿದ್ದು ಅದರಿಂದ ನಗರದ ನೈರ್ಮಲ್ಯಕ್ಕೆ ಧಕ್ಕೆಯಾಗುವ ಸಂಭವವಿದ್ದು ಕೂಡಲೇ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯ ವ್ಯವಸ್ಥೆ ಮಾಡಬೇಕೆಂದರು.

ಸದಸ್ಯರ ನುಡಿಗಳನ್ನು ಆಲಿಸಿದ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ,ಮುಖ್ಯಾಕಾರಿ ಈರಣ್ಣ ದಡ್ಡಿ ಮಾತನಾಡಿ ಎಲ್ಲ ಸದಸ್ಯರು ಕಳಕಳಿ ಸ್ವಾಗತಾರ್ಹವಾಗಿದ್ದು ಪಕ್ಷಭೇದ ಮರೆತು ಪ್ರತಿ ವಾರ್ಡಗೆ ಅನುದಾನ ಬಿಡುಗಡೆ ಮಾಡಲಾಗುವದು ಅದರಿಂದ ಅಭಿವದ್ಧಿ ಕಾರ್ಯಕ್ಕೆ ಅನುಕೂಲ ಆಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸನ್ 2025-26 ನೇ ಸಾಲಿನಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳ ನಿರ್ವಹಣೆಗೆ ಕರೆದ ಟೆಂಡರ್ ದರ ರೂ.3 ಲಕ್ಷ 54 ಸಾವಿರಗಳಿಗೆ ಅನುಮೋದನೆ ನೀಡಲಾಯಿತು.ಆರೋಗ್ಯ ವಿಭಾಗಕ್ಕೆ ಕಳೆದ ಅವಯಲ್ಲಿ ಸಾಧನ ಸಲಕರಣೆಗಳನ್ನು ಪೂರ‌್ಯಸಿದ ಟೆಂಡರ ದರದಂತೆ ಪ್ರಸಕ್ತ ಸಾಲಿನಲ್ಲಿಯೂ ಸದರಿ ಪೂರೈಕೆದಾರರಿಗೆ ಮುಂದುವರೆಸಲು ಅನುಮೋದನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲರಜಾಕ ಬಾಗವಾನ, ಅಕಾರಿಗಳಾದ ಎಸ್.ಎಂ.ಪಾಟೀಲ, ಎಸ್.ಎಂ.ಕಲಬುರ್ಗಿ, ಮಹಾಲಿಂಗ ಮುಗಳಖೋಡ, ಪಿ.ವೈ.ಸೊನ್ನದ, ಸದಸ್ಯರಾದ ಮುಸ್ತಾಕ ಚಿಕ್ಕೋಡಿ, ರಾಜು ಗೌಡಪ್ಪಗೋಳ, ಬಸವರಾಜ ಬುರುಡ, ಸ್ನೇಹಲ್ ಅಂಗಡಿ, ಭಾವನಾ ಪಾಟೀಲ, ಸವಿತಾ ಕೋಳಿಗುಡ್ಡ, ಚಾಂದನಿ ನಾಯಕ, ಸರಸ್ವತಿ ರಾಮೋಜಿ, ಗೋದಾವರಿ ಬಾಟ, ಸುಜಾತಾ ಮಾಂಗ, ನಾಮ ನಿರ್ದೇಶಿತ ಸದಸ್ಯರಾದ ವಿನೋದ ಶಿಂಪಿ, ಆನಂದ ಬಂಡಿ, ಪಾಪಾ ನಾಲಬಂದ, ಲಕ್ಕಪ್ಪ ಭಜಂತ್ರಿ, ಸಿಬ್ಬಂದಿಯವರಾದ ವಿಕ್ರಂ ಹವಾಲ್ದಾರ, ಅರುಣ ಸಣ್ಣಕ್ಕಿ, ರಾಜೇಶ್ವರಿ ಸೋರಗಾಂವಿ, ಚನ್ನಮ್ಮ ಪಟ್ಟಣಶೆಟ್ಟಿ,ರಾಮು ಮಾಂಗ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net