

ಸಿಂದಗಿ: ನಿಗದಿತ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪೌರ ಕಾರ್ಮಿಕರು, ಚಾಲಕರು, ಕಂಪ್ಯೂಟರ್ ಆಪರೇಟರ್‌ಗಳು ಸೋಮವಾರ ಪಟ್ಟಣದ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಬ್ಬಾಸಲಿ ಕಾಖಂಡಕಿ, ತಾಲೂಕು ಅಧ್ಯಕ್ಷ ಕಲ್ಲಪ್ಪ ಚೌರ ಮಾತನಾಡಿ, ಸಮಾನ ಕೆಲಸ ಸಮಾನ ವೇತನ ಸಿಬ್ಬಂದಿ 3 ತಿಂಗಳು, ಹೊರಗುತ್ತಿಗೆ ಕಂಪ್ಯೂಟರ್ ಆಪರೇಟರ್‌ಗಳ 12 ತಿಂಗಳು, ವಾಹನ ಚಾಲಕರ 6 ತಿಂಗಳು, ಪೌರ ಕಾರ್ಮಿಕರ 21 ದಿನಗಳ ವೇತನ ಸೇರಿ ಕಾಯಂ ಸಿಬ್ಬಂದಿ ಶೇ. 17ರ ವೇತನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರ ಉಪಾಹಾರದ ಬಿಲ್ ನೀಡಿಲ್ಲ. ಮುಖ್ಯಾಧಿಕಾರಿಗಳಿಗೆ ವೇತನ ನೀಡದ್ದಕ್ಕೆ ಕಾರಣ ಕೇಳಿದರೆ, ಪುರಸಭೆಯಲ್ಲಿ ಹಣವಿಲ್ಲ ಎನ್ನುತ್ತಿದ್ದಾರೆ. ನಮ್ಮ ಸಿಬ್ಬಂದಿಗೆ ನಿಗದಿತ ವೇತನ ಸಿಗುತ್ತಿಲ್ಲ. ಕೆಲ ಸಿಬ್ಬಂದಿ ಎ್.ಪಿ.ಎ್, ಎಲ್.ಐ.ಸಿ. ಎನ್.ಪಿ.ಎಸ್. ಹಣ ಪಾವತಿಯಾಗಿಲ್ಲ. ಅಲ್ಲದೆ, ನಮ್ಮ ಕುಟುಂಬಕ್ಕೆ ಸಿಗುವ ಭವಿಷ್ಯದ ಸವಲತ್ತುಗಳ ಮುಂಗಡ ಹಣವನ್ನೂ ಭರಿಸುತ್ತಿಲ್ಲ ಎಂದು ದೂರಿದರು.
ಪುರಸಭೆಯಲ್ಲಿ ಏಜೆಂಟರ್ ಹಾವಳಿ ತಪ್ಪಿಲ್ಲ. ಆಸ್ತಿ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಕಡಿಮೆ ಮೊತ್ತದ ಚಲನ್ ಸೃಷ್ಟಿಸಿ ಪುರಸಭೆಗೂ ಆರ್ಥಿಕ ಹಾನಿಯನ್ನುಂಟು ಮಾಡುತ್ತಿದ್ದಾರೆ. ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಏಜೆಂಟರ ಮೇಲೆ ದೂರು ದಾಖಲಿಸಬೇಕು. ಪೌರ ಕಾರ್ಮಿಕ ಸಿಬ್ಬಂದಿಗೆ ಮಾಸಿಕ ವೇತನ ಪಾವತಿ ಮಾಡಬೇಕೆಂದು ಒತ್ತಾಯಿಸಿದರು.
ಜಿ.ಬಿ. ಹೊಡ್ಲ, ಜೆ.ಸಿ. ಹರಿಜನ, ಅನೀಲ ಚೌರ, ದಯಾನಂದ ಕಲಬುರ್ಗಿ, ಬಸವರಾಜ ಜಾಬಾನವರ, ಮುಭಾರಕ ಪಡೇಕನೂರ, ರವಿ ದೊಡಮನಿ, ಕಳಕಪ್ಪ ಮಲ್ಲೇದ, ಬಸವರಾಜ ಸಿನ್ನೂರ, ಮೈಬೂಬ್ ಆಲಮೇಲ, ಪ್ರಮೋದ ಗುತ್ತರಗಿ, ಖಾಜು ಬಾವಿಮನಿ, ಇಸ್ಮಾಯಿಲ್ ಶಹಾಪೂರ, ಮರೆವ್ವ ದೊಡಮನಿ, ರೇಣುಕಾ ಚೌರ, ರಾಜಶ್ರೀ ಮಾಣಸುಣಗಿ, ಸರೂಬಾಯಿ ಸುಲ್ಫಿ ಇತರರಿದ್ದರು.