

ಯರಗಟ್ಟಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ತವ್ಯಕ್ಕೆ ಹಾಜರಾಗದೆ ಪೌರ ನೌಕರರು ಇಲ್ಲಿನ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಮಂಗಳವಾರ ಅರ್ನಿಧಿಷ್ಟಾವಧಿ ಮುಷ್ಕರ ಕೈಗೊಂಡರು. ಕಸ ವಿಲೇವಾರಿ, ಸ್ವಚ್ಛತೆ, ನೀರು ಪೂರೈಕೆ, ಒಳಚರಂಡಿ ನಿರ್ವಹಣೆ ಸೇರಿ ಕರ್ತವ್ಯ ಸ್ಥಗಿತಗೊಳಿಸಿ ಅನಿಧಿಷ್ಟಾವದಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ನ್ಯಾಯ ಸಮ್ಮತ ಬೇಡಿಕೆ ಈಡೇರಿವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಮುಷ್ಕರನಿರತ ನೌಕರರು ತಿಳಿಸಿದರು.
ನವೀನ ಕಣವಿ, ಹನುಮಂತ ಹುಣಸಿಕಟ್ಟಿ, ಉಮರಬೇಗ ಜಮಾದಾರ, ಮೊಮ್ಮದ್ಹನ್ೀ ಅತ್ತಾರ, ಶಿವಾಜಿ ಭಜಂತ್ರಿ, ಕೀರಪ್ಪ ಚನ್ನಮೇತ್ರಿ, ಯಲ್ಲವ್ವ ಚನ್ನಮೇತ್ರಿ, ಲ$್ಮ ಚನ್ನಮೇತ್ರಿ, ಮಂಜುಳಾ ತಳವಾರ, ಸಾಮವ್ವ ಹುಣಸಿಕಟ್ಟಿ, ಮಲ್ಲಪ್ಪ ಬಾರ್ಕಿ, ಮಾದೇವಿ ಗುದನಟ್ಟಿ , ಮಾಬುಸುಬಾನಿ ಜಮಾದರ, ಬಸವರಾಜ ಚನ್ನಮೇತ್ರಿ ಇತರರಿದ್ದರು.