ನಗರಸಭೆ, ತಾಲೂಕು ಆಡಳಿತದಿಂದ ಸಿಂಧನೂರಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ನೆಲಸಮ

040320 Sindhanuru Illegal Buildings Collaps
Published on

ಸಿಂಧನೂರು: ನಗರದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ, ಸಿಎ ಸೈಟ್‌ಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಧಾರ್ಮಿಕ ಕಟ್ಟಡಗಳನ್ನು ನಗರಸಭೆ, ತಾಲೂಕು ಆಡಳಿತದಿಂದ ಬುಧವಾರ ಬೆಳಗ್ಗೆ ಜೆಸಿಬಿಯಿಂದ ನೆಲಸಮಗೊಳಿಸಲಾಯಿತು.

ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ಪಿಎಸ್‌ಐ ವಿಜಯಕೃಷ್ಣ ನೇತೃತ್ವದಲ್ಲಿ ಪೊಲೀಸ್ ಬಂದೊಬಸ್ತ್‌ನೊಂದಿಗೆ ವಾರ್ಡ್ ನಂ.1 ರಿಂದ ವಿವಿಧೆಡೆ ರಸ್ತೆ, ಸಿಎ ಸೈಟ್ ಸೇರಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಗೊಂಡ ದೇವಸ್ಥಾನ, ದೇವರ ಕಟ್ಟೆ ಹಾಗೂ ಧ್ವಜ ಕಟ್ಟೆಗಳನ್ನು ಜೆಸಿಬಿ ಯಂತ್ರದಿಂದ ನೆಲಸಮಗೊಳಿಸಿ, ಸ್ವಚ್ಛಗೊಳಿಸಲಾಯಿತು.

ನಗರದ ಹಳೇ ಬಜಾರ್, ಉಪ್ಪಾರವಾಡಿಗಳಲ್ಲಿ ದೇವಸ್ಥಾನ ತೆರವು ಸಂದರ್ಭ ಪೌರಾಯುಕ್ತರ ಜತೆಗೆ ಕೆಲವರು ವಾಗ್ವಾದ ನಡೆಸಿದರು. ಸುಪ್ರೀಂಕೋರ್ಟ್ ಆದೇಶದಂತೆ ದೇವಸ್ಥಾನ, ದೇವರಕಟ್ಟೆಗಳನ್ನು ತೆರವುಗೊಳಿಸಿದ್ದು ಇಲ್ಲಿ ಯಾರ ಸ್ವಾರ್ಥವು ಇಲ್ಲ. ಸುಪ್ರೀಂಕೋರ್ಟ್ ಆದೇಶ ಪಾಲಿಸಿದ್ದೇವೆ ಎಂದು ಪೌರಾಯುಕ್ತ ವಿರೂಪಾಕ್ಷಮೂರ್ತಿ ಹಾಗೂ ತಹಸೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net