

ಹರಪನಹಳ್ಳಿ: ಮೀಸಲಾತಿ ಸಂಬಂಧ ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನ ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಧಾರವಾಡ ಹೈಕೋರ್ಟ್ ಪೀಠ ತೆರವು ಮಾಡಿದ್ದು, ನ.11ರಂದು ಎಲೆಕ್ಷನ್ ನಡೆಸಲು ಆದೇಶಿಸಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಎಸ್ಟಿಗೆ ನೀಡಬೇಕೆಂದು ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಸಹ ಅರ್ಜಿ ಪರಿಗಣಿಸಿ ತಡೆಯಾಜ್ಞೆ ನೀಡಿತ್ತು.
ಆದರೆ, ಕೇವಲ 13 ತಿಂಗಳ ಅವಧಿ ಇದ್ದು, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ದ್ಯಾಮಜ್ಜಿ ರೊಕ್ಕಪ್ಪ ಸ್ವಯಂ ಪ್ರೇರಣೆಯಿಂದ ಕೇಸ್ ಹಿಂಪಡೆದಿದ್ದಾರೆ ಎಂದು ಪುರಸಭೆ ಬಿಜೆಪಿ ಸದಸ್ಯ ಹಾರಾಳು ಅಶೋಕ ಅವರು ತಿಳಿಸಿದ್ದಾರೆ.