ಹೊಸಕೋಟೆ ಕರಗೋತ್ಸವಕ್ಕೆ ನಗರಸಭೆ ಸಿದ್ಧತೆ

11 05 2025_BNG_RURAL_PAGE_3
ಹೊಸಕೋಟೆಯ ಕರಗಮಹೋತ್ಸವ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾಮಗಾರಿಯನ್ನು ನಗರಸಭೆ ಅಧ್ಯೆ ಆಶಾರಾಜಶೇಖರ್​ ಪರಿಶೀಲಿಸಿದರು. ನಗರಸಭೆ ಸಿಬ್ಬಂದಿ ಇದ್ದರು.
Published on

ಹೊಸಕೋಟೆ : ಹೊಸಕೋಟೆಯ ಸುಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ, ದ್ರೌಪದಮ್ಮ ಕರಗ ಮಹೋತ್ಸವಕ್ಕೆ ನಗರಸಭೆ ಸಭೆಯಿಂದ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಮೇ 11ರಿಂದ 13ರವರೆಗೆ ನಡೆಯಲಿರುವ ಕರಗ ಉತ್ಸವ ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತುರರಾಗಿದ್ದಾರೆ.

ಹೊಸಕೋಟೆಯ ಕರಗ ಮಹೋತ್ಸವಕ್ಕೆ ಸಂಬಂಧಿಸಿದಂತೆ ಕರಗ ಸಾಗುವ ಪ್ರಮುಖ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ, ಚರಂಡಿಗಳಲ್ಲಿ ಹೂಳು ತೆಗೆದು ನೀರಿನ ಸರಾಗ ಹರಿವಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಮುಖ ರಸ್ತೆಗಳಿಗೆ ಡಾಂಬರೀಕರಣದ ಮೂಲಕ ವೀರಕುಮಾರರು ಸಾಗುವ ರಸ್ತೆಗಳನ್ನು ದುರಸ್ತಿಪಡಿಸಲಾಗಿದೆ ಎಂದು ನಗರಸಭೆ ತಿಳಿಸಿದೆ.

ವಿದ್ಯುತ್​ ವ್ಯವಸ್ಥೆ : ದೇವಸ್ಥಾನ, ದೇಗುಲದ ಪ್ರಾಂಗಣ ಸೇರಿ ಉತ್ಸವ ನಡೆಯುವ ಎಲ್ಲ ಕಡೆಗಳಲ್ಲಿ ವಿದ್ಯುತ್​ ಸಂಪರ್ಕ ಸೇರಿ ವಿದ್ಯುತ್​ ಅಲಂಕಾರಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಟನೆಗಳಿಗೆ ಅವಕಾಶ ಮಾಡಿಕೊಡದಂತೆ

ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ನೂರಾರು ಸಿಸಿ ಟಿವಿ ಕ್ಯಾಮರಾಗಳ ಕಣ್ಗಾವಲು ಇರಲಿದೆ. ಇದರ ಸಂಪೂರ್ಣ ದೃಶ್ಯಾವಳಿ ವೀಕ್ಷಣೆಗೆ ಹೊಸಕೋಟೆ ಠಾಣೆಯಲ್ಲಿ ಮಾನಿಟರಿಂಗ್​ ಮಾಡಲಾಗುತ್ತದೆ, ಅಲ್ಲದೆ ಸೂಕ್ತ ಪೊಲೀಸ್​ ಭದ್ರತೆಗೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಕಾರ್ಯಕ್ರಮಗಳು: ಹಸಿಕರಗದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಭಾನುವಾರ ದೀಪೋತ್ಸವ ನಡೆಯಲಿದೆ, 12ರಂದು ಬೆಳಗ್ಗೆ 11 ಗಂಟೆಗೆ ಬ್ರಹ್ಮರಥೋತ್ಸವ ನಡೆಯಲಿದ್ದು, ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ರಾತ್ರಿ 12 ಗಂಟೆಗೆ ಹೂವಿನ ಕರಗ ನಡೆಯಲಿದೆ, ಮಂಗಳಾರ ಪೋತರಾಜ ಕಾರ್ಯಕ್ರಮದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ.

ಹೊಸಕೋಟೆ ಹಬ್ಬ ಹಾಗೂ ಕರಗದ ಪ್ರಯುಕ್ತ, ತೇರು ನಡೆಯುವ ರಸ್ತೆ ಹಾಗೂ ಜಾಗಗಳನ್ನು ಪರಿಶೀಲಿಸಲಾಗಿದ್ದು, ಅದಕ್ಕೆ ಅನುಗುಣವಾಗಿ ಕಸ ವಿಂಗಡಣೆ, ರಸ್ತೆ ದುರಸ್ತಿ, ನೀರಿನ ಸೋರಿಕೆ ತಡೆಯುವುದು ಸೇರಿ ಹಬ್ಬದ ದಿನಗಳಲ್ಲಿ ಸಾರ್ವಜನಿಕರಿಗೆ ರಾತ್ರಿಯ ವೇಳೆ ಓಡಾಡಲು ಅನುಗುಣವಾಗಿ ವಿದ್ಯುತ್​ ವ್ಯವಸ್ಥೆ ಮಾಡಲಾಗುತ್ತಿದೆ. | ಆಶಾ ರಾಜಶೇಖರ್​ ನಗರಸಭೆ ಅಧ್ಯೆ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net