ನಗರಸಭೆ, ಪಪಂ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಮಿತಿ ನಿರ್ಧಾರ ಅಂತಿಮ, ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿಕೆ

180120 Siriguppa BJP Workers Meeting
Published on

ಸಿರಗುಪ್ಪ: ನಗರಸಭೆ, ತೆಕ್ಕಲಕೋಟೆ ಪಪಂ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಐವರು ಹಿರಿಯ ಮುಖಂಡರ ನೇತೃತ್ವದ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಯಾರಿಗೆ ಬಿ.ಫಾರ್ಮ್ ನೀಡಬೇಕು ಎಂಬುದನ್ನು ಸಮಿತಿ ನಿರ್ಧರಿಸುತ್ತದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಗರದ ಒಟ್ಟು 31 ವಾರ್ಡ್, ತೆಕ್ಕಲಕೋಟೆ ಪಪಂಯ 20 ವಾರ್ಡ್‌ಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದಾಗ ಮಾತ್ರ ಸ್ಥಳೀಯರಿಗೆ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಶ್ರಮ ಅಪಾರವಾಗಿದೆ. ಈ ಚುನಾವಣೆಯಲ್ಲಿಯೂ ಸಂಘಟನೆಗೆ ಒತ್ತು ನೀಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಎಂ.ವೆಂಕಟೇಶ ನಾಯಕ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಮೂರ್ತಿಸ್ವಾಮಿ, ಮುಖಂಡರಾದ ಮೆಕಲಿ ವೀರೇಶ, ಕಂಬಾಳಿ ಮಲ್ಲಿಕಾರ್ಜುನ, ಆರ್.ಸಿ.ಪಂಪನಗೌಡ, ಜಿ.ಸಿದ್ದಪ್ಪ, ಕೊಡ್ಲೆ ಮಲ್ಲಿಕಾರ್ಜುನ, ಬಿ.ಇ.ದೊಡ್ಡಯ್ಯ, ನಾಂಚಾರಯ್ಯ, ಅಲುವೇಲಮ್ಮ, ಚೊಕ್ಕ ಪಾಲಾಕ್ಷಗೌಡ, ಶಫಿ, ಮಾರೆಪ್ಪ, ಸಿದ್ದರಾಮನಗೌಡ, ಆರ್.ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net