ನಗರಸಭೆ ಗಮನಕ್ಕಿಲ್ಲ ವಿನ್ಯಾಸ ಬದಲಾವಣೆ

2 GVT 01
ಬೀದಿ ಕಂಬದ ದೀಪದ ವಿನ್ಯಾಸ ಸೇರಿ ಇತರೆ ಕಾಮಗಾರಿ ಕುರಿತು ಗಂಗಾವತಿ ನಗರಸಭೆ ಕಚೇರಿಯಲ್ಲಿ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ನೇತೃತ್ವದಲ್ಲಿ ನಿರ್ವಹಣೆ ಅಧಿಕಾರಿಗಳೊಂದಿಗೆ ತುರ್ತುಸಭೆ ಬುಧವಾರ ಜರುಗಿತು. ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಪ್ರಭಾರ ಎಇಇ ಶರಣಪ್ಪ, ಎಇ ಆಸ್ಮಾ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಗಂಗಾವತಿ

ನಗರದ ಪ್ರಮುಖರಸ್ತೆಗಳಲ್ಲಿನ ಬೀದಿ ಕಂಬದ ದೀಪದ ವಿನ್ಯಾಸ ನಗರಸಭೆ ಗಮನಕ್ಕೆ ಬಾರದಂತೆ ಬದಲಿಸಲಾಗಿದ್ದು, ನಗರಸಭೆಗೆ ಕೆಆರ್‌ಡಿಐಎಲ್ ಬರೆದ ಪತ್ರದಿಂದ ಬಹಿರಂಗಗೊಂಡಿದೆ.

ನಗರದ ಗಾಂಧಿ ವೃತ್ತದಿಂದ ತಾಲೂಕು ಕ್ರೀಡಾಂಗಣ, ಚನ್ನಬಸವ ಸ್ವಾಮಿಮಠದಿಂದ ನೀಲಕಂಠೇಶ್ವರ ವೃತ್ತದವರೆಗಿನ ಬೀದಿ ಕಂಬದ ದೀಪಗಳನ್ನು 3 ಕೋ.ರೂ.ವೆಚ್ಚದಲ್ಲಿ ನವೀಕರಣಗೊಳಿಸಲಾಗುತ್ತಿದ್ದು, ಕೆಕೆಆರ್‌ಡಿಬಿ ಅನುದಾನ ಮಂಜೂರಾಗಿದೆ. ಪಾರಂಪರಿಕ ರೀತಿಯಲ್ಲಿ ರೂಪಿಸಿದ ಕಂಬದ ವಿನ್ಯಾಸಕ್ಕೆ ನಗರಸಭೆ ಮೇ 17ರಂದು ಅನುಮೋದನೆ ನೀಡಿದ್ದು, ಕಾಮಗಾರಿಗೂ ಎನ್‌ಒಸಿ ನೀಡಿತ್ತು. ಉದ್ದೇಶಿತ ವಿನ್ಯಾಸಕ್ಕೆ ನಗರಸಭೆ ಆಡಳಿತ ಮಂಡಳಿಯೂ ಒಪ್ಪಿಗೆ ನೀಡಿತ್ತು.

ವಿನ್ಯಾಸದಲ್ಲಿರುವ ಕೆಲ ಆಕಾರಗಳು ಕೆಲ ಸಮುದಾಯಕ್ಕೆ ಧಕ್ಕೆಯಾಗಬಹುದೆಂಬ ಉದ್ದೇಶದಿಂದ ನಗರಸಭೆ ಗಮನಕ್ಕೆ ಬಾರದಂತೆ ಬದಲಿಸಿದ್ದು, ಹೊಸ ವಿನ್ಯಾಸದ ಕಂಬಗಳನ್ನು ಈಗಾಗಲೇ ರೂಪಿಸಲಾಗಿದೆ. ಕಂಬಗಳು ಬಂದ ನಂತರವೇ ಬದಲಾವಣೆಗೆ ಕೆಐಆರ್‌ಡಿಎಲ್ ನಗರಸಭೆಗೆ ಜೂ.30ರಂದು ಪತ್ರ ಬರೆದಿತ್ತಲ್ಲದೇ, ಸಂಬಂಧಪಟ್ಟ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿದೆ ಇನ್‌ವಾರ್ಡ್ ಸೆಕ್ಷನ್‌ಗೆ ನೀಡಿ ಕೈ ತೊಳೆದುಕೊಂಡಿದೆ. ಬದಲಾದ ವಿನ್ಯಾಸ ಸದ್ಯಕ್ಕೆ ಶಾಸಕರ ಅಂಗಳದಲ್ಲಿದ್ದು, ಬಂದ ನಂತರವೇ ೈನಲ್ ಮಾಡುವ ನಿರ್ಧಾರ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.

ತೀವ್ರ ತರಾಟೆ:

ಕೆಐಆರ್‌ಡಿಎಲ್ ಇಂಜಿನಿಯರ್‌ಗಳ ವಿಳಂಬ ನೀತಿ ಮತ್ತು ಏಕಪಕ್ಷೀಯ ವರ್ತನೆಗೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಗರಂ ಆಗಿದ್ದು, ದೂರವಾಣಿ ಮೂಲಕ ಎಇಇ ರ್ಇಾನ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆಡಳಿತ ಮಂಡಳಿಯೊಂದಿಗೆ ಚರ್ಚಿಸದೇ ಏಕಾಏಕಿ ಬದಲಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಎಇಇ ರ್ಇಾನ್ ಪ್ರತಿಕ್ರಿಯೆಸಿ, ಶಾಸಕರ ಸೂಚನೆಯಂತೆ ವಿನ್ಯಾಸ ಬದಲಿಸಿದ್ದು, ಒಪ್ಪಿಗೆಗಾಗಿ ನಗರಸಭೆಗೆ ಅರ್ಜಿ ಸಲ್ಲಿಸಿದ್ದೇನೆ. 98 ಲಕ್ಷ ರೂ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಎನ್‌ಒಸಿ ನೀಡಿದ ನಂತರವೇ ಆರಂಭಿಸಲಾಗುವುದು. ಜಯನಗರ ಬೈಪಾಸ್ ರಸ್ತೆ ಸಿಸಿ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.

ತುರ್ತು ಸಭೆ:

ಬೀದಿ ದೀಪದ ಕಾಮಗಾರಿ ಸೇರಿ ಇತರೆ ಯೋಜನೆಗಳ ಬಗ್ಗೆ ನಗರಸಭೆ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ತುರ್ತು ಸಭೆ ಕರೆದಿದ್ದು, ಕಾಮಗಾರಿ ವಿಳಂಬದ ಬಗ್ಗೆ ಇಂಜಿನಿಯರ್‌ಗಳನ್ನು ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ತರಾಟೆಗೆ ತೆಗೆದುಕೊಂಡರು. ಗುತ್ತಿಗೆ ಪಡೆದ ಕೆಐಆರ್‌ಡಿಎಲ್ ಬಗ್ಗೆ ನಿಗಾವಹಿಸುವುದಲ್ಲದೇ, ಗುಣಮಟ್ಟ ಕಾಮಗಾರಿ ನಿರ್ವಹಿಸುವಂತೆ ಸೂಚನೆ ನೀಡಲು ನಗರಸಭೆ ಇಂಜಿನಿಯರ್‌ಗಳಿಗೆ ತಿಳಿಸಿದರು. ನಂತರ ಸುದ್ದಿಗಾರರೊಂದಿಗೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾತನಾಡಿ, ಶಾಸಕರು ಬಂದ ನಂತರ ವಿನ್ಯಾಸ ಅಂತಿಮಗೊಳಿಸಲಾಗುತ್ತಿದ್ದು, ಆಡಳಿತ ಮಂಡಳಿಗೆ ಜವಾಬ್ದಾರಿ ನೀಡಲಾಗಿದೆ. ವಿನ್ಯಾಸ ಇತ್ಯರ್ಥಗೊಂಡ ವಾರದೊಳಗೆ ಬೀದಿ ಕಂಬದ ದೀಪ ಕಾಮಗಾರಿ ಪೂರ್ಣಗೊಳಿಸಲಾಗುವುದು. ಸಿಟಿ ಮಾರುಕಟ್ಟೆ ಬಾಕಿ ಕಾಮಗಾರಿ ಜು.30ರೊಳಗೆ ಪೂರ್ಣಗೊಳ್ಳಲಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯರಾದ ಮುಷ್ತಾಕ್ ಅಹ್ಮದ್, ಜಬ್ಬಾರ್, ಪ್ರಭಾರ ಎಇಇ ಶರಣಪ್ಪ, ಎಇ ಆಸ್ಮಾ, ಆರೋಗ್ಯ ನಿರೀಕ್ಷಕ ಎ.ನಾಗರಾಜ, ಪರಿಸರ ಇಂಜಿನಿಯರ್ ಚೇತನ ನಾಯ್ಕ ಇತರರಿದ್ದರು.

ಆಪ್ತನ ಹಸ್ತಕ್ಷೇಪಕ್ಕೆ ಆಡಳಿತ ಪಕ್ಷ ಜೀತಿ ಬೀದಿ ಕಂಬದ ದೀಪದ ವಿನ್ಯಾಸ ಬದಲಾವಣೆ ಹಿಂದೆ ಶಾಸಕ ಗಾಲಿ ಜನಾರ್ದನರೆಡ್ಡಿ ಆಪ್ತ ಎಂ.ಆಲಿಖಾನ್ ಹಸ್ತ ಕ್ಷೇಪ ಕಂಡು ಬಂದಿದ್ದು, ಮೌಖಿಕ ಆದೇಶದ ಮೇರೆಗೆ ಬದಲಾಗಿದೆ ಎಂಬ ಮಾಹಿತಿ ಗೊತ್ತಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮತ್ತು ಆಡಳಿತ ಪಕ್ಷದ ಸದಸ್ಯರು ಜೀತಿಗೊಳಗಾಗಿದ್ದಾರೆ. ಯಾವಕಾರಣಕ್ಕೆ ವಿನ್ಯಾಸ ಬದಲಾವಣೆ ಬಗ್ಗೆ ಯಾರಲ್ಲೂ ಸ್ಪಷ್ಟತೆಯಿಲ್ಲ, ಬಹಿರಂಗಪಡಿಸಲು ಕೆಐಆರ್‌ಡಿಎಲ್ ಇಂಜಿನಿಯರ್ ಒಪ್ಪುತ್ತಿಲ್ಲ. ಶಾಸಕರೊಂದಿಗೆ ಚರ್ಚಿಸಿದ ಮೇಲೆ ಅಂತಿಮ ನಿರ್ಧಾರಕ್ಕೆ ಬರಲು ಆಡಳಿತ ಪಕ್ಷದ ಸದಸ್ಯರು ನಿರ್ಧರಿಸಿದ್ದು, ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಬೀದಿಕಂಬದ ದೀಪದ ವಿನ್ಯಾಸದ ಜವಾಬ್ದಾರಿ ಆಡಳಿತ ಪಕ್ಷದ ಸದಸ್ಯರಿಗೆ ಒಪ್ಪಿಸಿದ್ದು, ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ಸಂಸ್ಥೆಗೆ ಗಡವು ನೀಡಲಾಗಿದೆ. ಆರ್. ವಿರೂಪಾಕ್ಷಮೂರ್ತಿ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net