ಜಲಸಿರಿ ಕುಡಿಯುವ ನೀರಿನ ಸರಬರಾಜು ಶೀಘ್ರ

Hrr31Cmc2
Published on

ಹರಿಹರ: ನಗರದ ಕೆಎಚ್​ಬಿ ಕಾಲನಿಗೆ ಶೀಘ್ರವೇ 24*7 ಜಲಸಿರಿ ಕುಡಿಯುವ ನೀರಿನ ಸರಬರಾಜು ಆರಂಭಿಸಲಾಗುವುದೆಂದು ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಭರವಸೆ ನೀಡಿದರು.

ನಾಗರಿಕರ ಹಿತರಕ್ಷಣಾ ಸಮಿತಿಯ ಆಹ್ವಾನದ ಮೇರೆಗೆ ಶನಿವಾರ ಕಾಲನಿಗೆ ಭೇಟಿ ನೀಡಿದ್ದ ಪೌರಾಯುಕ್ತರು, ಈಗಾಗಲೇ ನಗರದ ಬಹುತೇಕ ವಸತಿ ಪ್ರದೇಶಗಳಲ್ಲಿ ಜಲಸಿರಿ ನೀರಿನ ಸೌಲಭ್ಯ ಒದಗಿಸಲಾಗಿದೆ. ತಾಂತ್ರಿಕ ಅಡ್ಡಿಯಿಂದಾಗಿ ಈವರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗಿಲ್ಲ. ಈ ಕುರಿತು ಇರುವ ಅಡ್ಡಿಗಳು ನಿವಾರಣೆಯಾಗುತ್ತಿದೆ ಎಂದರು.

ಇಲ್ಲಿನ ಹದಗೆಟ್ಟ ರಸ್ತೆಗಳ ಬಗ್ಗೆ ನಿವಾಸಿಗಳು ಗಮನ ಸೆಳೆದಾಗ, ಸದ್ಯಕ್ಕೆ ಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಸರ್ಕಾರಿ ನಿರ್ವಿುತ ಈ ವಸತಿ ಪ್ರದೇಶದಲ್ಲಿ ಸಾಕಷ್ಟು ಜನರು ವಾಸಿಸುತ್ತಿದ್ದಾರೆ. ನಿಯಮ ಬದ್ಧವಾಗಿ ನಗರಸಭೆಗೆ ಕಂದಾಯ ಪಾವತಿ ಮಾಡುತ್ತಿದ್ದಾರೆ. ಆದರೆ ಉದ್ಯಾನವನ, ನೀರು, ರಸ್ತೆ, ಬೀದಿ ದೀಪ ಸೇರಿ ವಿವಿಧ ಮೂಲ ಸೌಕರ್ಯಗಳು ಇಲ್ಲಿ ಮರೀಚಿಕೆಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಕಾಲನಿಗೆ ನಗರಸಭೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಚ್. ನಿಜಗುಣ ಆಗ್ರಹಿಸಿದರು.

ಜಲಸಿರಿ ಎಇಇ ನವೀನ್ ಕುಮಾರ್, ನಗರಸಭೆ ಎಇಇ ಕೆ.ಎನ್. ವಿನಯ್ ಕುಮಾರ್, ಎಇ ಪ್ರಕಾಶ್, ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾದ ಜಿ.ಕೆ. ಮಲ್ಲಿಕಾರ್ಜುನ್, ವೀರಣ್ಣ ಯಾದವಾಡ, ರುದ್ರೇಶ್ ಗೌಡ, ಶಿಕ್ಷಕ ಅಶೋಕ್, ಹೋಟೆಲ್ ರಾಮ್ಾಬು, ಸುರೇಶ್ ಹಂಚಿನಗೌಡ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net