ಹುಣಸೂರು ವಾರ್ಡ್‌ಗಳಲ್ಲಿ ನಗರಸಭಾಧ್ಯಕ್ಷ ಪರಿಶೀಲನೆ

HUN-JULY-4-1(CMC PRE VISIT TO WARDS)
ಹುಣಸೂರು ನಗರದ ವಾರ್ಡ್ ಸಂಖ್ಯೆ 25ರ ಮೂಲಸೌಕರ್ಯ ಕೊರತೆ ಕುರಿತು ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಪರಿಶೀಲನೆ ನಡೆಸಿದರು. ಸದಸ್ಯ ಮಂಜು, ಪೌರಾಯುಕ್ತೆ ಕೆ.ಮಾನಸಾ, ಎಇಇ ಶರ್ಮಿಳಾ ಇದ್ದರು.
Published on

ಹುಣಸೂರು: ಹುಣಸೂರು ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ವಾರ್ಡ್ ಸಂಖ್ಯೆ 21 ಮತ್ತು 25ಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ವಾರ್ಡ್ ನಂ.21ರಲ್ಲಿ ನಿವಾಸಿಯೊಬ್ಬರು ರಸ್ತೆ ಮೇಲೆ ಕೊಟ್ಟಿಗೆ ಕಟ್ಟಿಕೊಂಡ ಪರಿಣಾಮ ಜಾನುವಾರುಗಳ ಗಂಜಲ ಕುಡಿಯುವ ನೀರಿನ ವಾಲ್ವ್ ಗುಂಡಿಯನ್ನು ಸೇರುತ್ತಿರುವುದನ್ನು ನಾಗರಿಕರು ಗಮನಕ್ಕೆ ತಂದರು. ಸ್ಥಳದಲ್ಲೇ ಕೊಟ್ಟಿಗೆಯನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ನಗರಸಭಾಧ್ಯಕ್ಷ ಸೂಚಿಸಿದರು.

ಪೌರಕಾರ್ಮಿಕರ ಕಾಲನಿ ನಿವಾಸಿಗಳಿಗೆ ಕಾವೇರಿ ಕುಡಿಯುವ ನೀರಿನ ಪೂರೈಕೆ ಮಾಡಲು 3 ವರ್ಷಗಳಿಂದ ಕೋರುತ್ತಿದ್ದು, ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ವಾರ್ಡ್ ಸದಸ್ಯೆ ರಾಣಿ ಪೆರುಮಾಳ್ ಬೇಸರ ವ್ಯಕ್ತಪಡಿಸಿದಾಗ, ಅಮೃತ್ ಯೋಜನೆಯಡಿ ನಗರದಾದ್ಯಂತ ಶುದ್ಧ ಕಾವೇರಿ ಕುಡಿಯುವ ನೀರು ದೊರಕಲಿದೆ. ಈಗಾಗಲೇ ಬಹುತೇಕ ಕಡೆ ಕಾಮಗಾರಿ ಸಂಪನ್ನಗೊಳ್ಳುತ್ತಿದೆ ಎಂದು ಪೌರಾಯುಕ್ತೆ ಕೆ.ಮಾನಸಾತಿಳಿಸಿದರು.

ವಾರ್ಡ್ ಸಂಖ್ಯೆ 25ರ ವ್ಯಾಪ್ತಿಯಲ್ಲಿರುವ ವಾಂಬೆ ಬಡಾವಣೆಯಲ್ಲಿ ಹಲವಾರು ಮೂಲಸೌಕರ್ಯ ಮತ್ತು ಮನೆ ಮಾಲೀಕತ್ವದ ಸಮಸ್ಯೆಗಳು ಕಾಡುತ್ತಿದ್ದು, ಶಾಸಕರ ನೇತೃತ್ವದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ವಾರ್ಡ್ ಸದಸ್ಯ ಮಂಜು ಅವರಿಗೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಭರವಸೆ ನೀಡಿದರು.

ಭೇಟಿ ವೇಳೆ ನಗರಸಭೆ ಎಇಇ ಶರ್ಮಿಳಾ, ಪರಿಸರ ಇಂಜಿನಿಯರ್ ಸೌಮ್ಯಾ, ಕಂದಾಯ ಅಧಿಕಾರಿ ಸಿದ್ದಪ್ಪ, ಶಿವಕುಮಾರ್, ಮಧುಸೂದನ್ ಸೇರಿದಂತೆ ನೀರುಗಂಟಿ, ಪೌರಕಾರ್ಮಿಕರು, ಬಿಲ್ ಕಲೆಕ್ಟರ್‌ಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net