ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯ ಸುರತ್ಕಲ್ ಪ್ರದೇಶದ (ಇಡ್ಯಾ ವೆಟ್‌ವೆಲ್‌ಗೆ ಹೊಂದಿಕೊಂಡಿರುವ ಒಳಚರಂಡಿ ಜಾಲವನ್ನು ಹೊರತುಪಡಿಸಿ) ವಾರ್ಡ್ ನಂ. 1, 2, 3, 4, 5, 6, 8ರ ವ್ಯಾಪ್ತಿಯಲ್ಲಿ ಬರುವ ವಸತಿ, ವಾಣಿಜ್ಯ ಕಟ್ಟಡಗಳಿಗೆ ಅನಧಿಕೃತವಾಗಿ ಒಳಚರಂಡಿ (ಡ್ರೈನೇಜ್) ಸಂಪರ್ಕವನ್ನು ಪಡೆದಿರುವ ಕಟ್ಟಡಗಳ ಮಾಲೀಕರು ಕಡ್ಡಾಯವಾಗಿ ಮಹಾನಗರಪಾಲಿಕೆಯಿಂದ ಅಧಿಕೃತ ಒಳಚರಂಡಿ ಸಂಪರ್ಕವನ್ನು ಪಡೆದುಕೊಳ್ಳಬೇಕು.