ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ : ಸವೋರ್ಚ್ಚ ನ್ಯಾಯಾಲಯದ ಆದೇಶದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಾನೂನು ಬಾಹಿರ ಕಟ್ಟಡಗಳ ವಿದ್ಯುತ್​ ಸಂಪರ್ಕ ಕಡಿತಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.

ಮಹಾನರ ಪಾಲಿಕೆ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದಂತೆ ಮೊದಲ ಹಂತವಾಗಿ ವಿಜಯಪುರ ಮಹಾನಗರ ಪಾಲಿಕೆ ವಾರ್ಡ್​ ನಂ. 12 ರಲ್ಲಿನ ಮದ್ದಿನ ಖಣಿಯ ಸರ್ಕಾರಿ ರಸ್ತೆ ಜಾಗ ಒತ್ತುವರಿ ಮಾಡಿ ನಿರ್ಮಿಸಿದ ಅನಧಿಕೃತ ಕಟ್ಟಡಗಳು, ವಾರ್ಡ್​ ನಂ. 13 ರಲ್ಲಿನ ಆಶ್ರಮ ರಸ್ತೆಯ ಬಿಎಲ್​ಡಿಇ ಇಂಜಿನಿಯರಿಂಗ್​ ಕಾಲೇಜ್​ ಎದುರುಗಡೆಯ ರಸ್ತೆ ಅತಿಕ್ರಮಣ ಮಾಡಿ ನಿರ್ಮಿಸಿದ ಅನಧಿಕೃತ ಕಟ್ಟಡಗಳು ಹಾಗೂ ವಾರ್ಡ್​ ನಂ. 4 ರಲ್ಲಿನ ಸೊಲ್ಲಾಪುರ ರಸ್ತೆಯ ಬಂಜಾರ್​ ಕ್ರಾಸ್​ದಿಂದ ಬಿ.ಎಂ. ಪಾಟೀಲ ವೃತ್ತದವರೆಗಿನ ರಸ್ತೆಯ ಕಟ್ಟಡ ರೇಖೆಯಲ್ಲಿ ಬರುವ ನಿಯಮಬಾಹಿರ ಕಟ್ಟಡಗಳ ವಿದ್ಯುತ್​ ಸಂಪರ್ಕ ಹೆಸ್ಕಾಂದಿಂದ ಕಡಿತಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಾರ್ವಜನಿಕ ರಸ್ತೆ ಜಾಗದಲ್ಲಿ ಹಾಗೂ ಕಟ್ಟಡ ರೇಖೆಯಲ್ಲಿ ಬರುವ ನಿಯಮಬಾಹಿರ ಕಟ್ಟಡಗಳ ವಿದ್ಯುತ್​ ಸಂಪರ್ಕ ಕಡಿತಗೊಳಿಸಲಾಗುವುದು.

ಸಾರ್ವಜನಿಕರು ಇದಕ್ಕೆ ಆಸ್ಪದ ನೀಡದೆ ಸಾರ್ವಜನಿಕ ರಸ್ತೆಯಲ್ಲಿ ಹಾಗೂ ಕಟ್ಟಡ ರೇಖೆಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಬಾರದು. ಒಂದು ವೇಳೆ ನಿರ್ಮಿಸಿದ್ದಲ್ಲಿ ತೆರವುಗೊಳಿಸಬೇಕು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net