

ಗುಳೇದಗುಡ್ಡ: ಪುರಸಭೆಯ ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರದೇ ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ ಅವರು ಏಕಪಕ್ಷೀಯವಾಗಿ ಆಯವ್ಯಯ ಸಭೆ ಕರೆದಿದ್ದು, ಕಾನೂನು ಬಾಹಿರವಾಗಿ ಸರ್ವಾಧಿಕಾರಿ ಧೋರಣೆಯಿಂದ ಸಭೆ ಕರೆದ ಮುಖ್ಯಾಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.20ರಂದು ಕೋರ್ಟ್ ಆದೇಶದಂತೆ ನನ್ನ ಸ್ಥಾನ ರದ್ಧಾಗಿತ್ತು. ಆದರೆ, ಮುಖ್ಯಾಧಿಕಾರಿ ಯಾರ ಅನುನತಿ ಪಡೆಯದೇ ಸರ್ವಾಧಿಕಾರಿಯಂತೆ ಸಭೆ ಕರೆದಿದ್ದಾರೆ. ಬಜೆಟ್ ಸಭೆಯ ಸೂಚನಾ ಪತ್ರಕ್ಕೆ ಉಪಾಧ್ಯಕ್ಷರ ಸಹಿಯೂ ಇಲ್ಲ. ಮುಖ್ಯಾಧಿಕಾರಿಗೆ ಸಭೆ ನಡೆಸಲು ಅಧಿಕಾರ ಕೊಟ್ಟವರು ಯಾರು? ಎಂದರು.
ಪುರಸಭೆ ಸದಸ್ಯರಾದ ವಿಠ್ಠಲಸಾ ಕಾವಡೆ, ಸಂತೋಷ ನಾಯನೇಗಲಿ, ಯಲ್ಲಪ್ಪ ಮನ್ನಿಕಟ್ಟಿ, ಪ್ರಶಾಂತ ಜವಳಿ, ನಾಗರತ್ನಾ ಲಕ್ಕುಂಡಿ, ವಿದ್ಯಾ ಮುರಗೋಡ, ಜ್ಯೋತಿ ಆಲೂರ, ರಾಜೇಶ್ವರಿ ಉಂಕಿ ಹಾಗೂ ಪುರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಮುರಗೋಡ ಇದ್ದರು.