

ಮೂಡುಬಿದಿರೆ: 108 ಗಣಧರ ಆಚಾರ್ಯ ಕುಂಥು ಸಾಗರ ಮುನಿಮಹಾರಾಜರು ಹಾಗೂ ಮುನಿ ಸಂಘ ಮಂಗಳವಾರ ಮೂಡುಬಿದಿರೆ ಪುರಪ್ರವೇಶ ಮಾಡಿದರು.
ಹೊಸಂಗಡಿ ಅರಮನೆಯಲ್ಲಿ ತಂಗಿದ್ದ ಅವರನ್ನು ಸಮಾಜದ ಪ್ರಮುಖರು ಮೆರಣಿಗೆ ಮೂಲಕ ಮೂಡುಬಿದಿರೆ ಜೈನ ಮಠಕ್ಕೆ ಬರಮಾಡಿಕೊಂಡರು. ಜೈನ ಮಠದ ಬಳಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮುನಿ ಸಂಘವನ್ನು ಸ್ವಾಗತಿಸಿದರು. ಬಳಿಕ ಜೈನ ಮಠದಲ್ಲಿ ಪಾದ ಪೂಜೆ ನಡೆಯಿತು.
ಗುರು ಬಸದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಾಜಿ ಸಚಿವ ಅಭಯಚಂದ್ರ ಜೈನ್, ಬಸದಿಗಳ ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ಸರ್ವ ಮಂಗಳ ಮಹಿಳಾ ಮಂಡಳಿ ಅಧ್ಯಕ್ಷೆ ಸುಧಾ ಪಾರ್ಶ್ವನಾಥ್, ಪ್ರಮುಖರಾದ ಶೈಲೇಂದ್ರ ಕುಮಾರ್, ಆದರ್ಶ ಎಂ.ಅರಮನೆ, ಡಾ.ಮಹಾವೀರ ಜೈನ್, ಅನಂತವೀರ ಜೈನ್ ಮತ್ತಿತರರಿದ್ದರು.