28ರಂದು ಕಾನ್ಬೆಟ್ಟು ಮುಂಡುಕಾಡ್ಯ ಕೆಂಡಸೇವೆ

kenda new
Published on

ಹೆಬ್ರಿ: ಕುಚ್ಚೂರಿನ ಕಾನ್ಬೆಟ್ಟು ಮುಂಡುಕಾಡ್ಯಸ್ಥಾನದಲ್ಲಿ ಡಿ.28ರಂದು ಮೊದಲ ಬಾರಿಗೆ ಕೆಂಡಸೇವೆಯು ಜರುಗಲಿದೆ. ಹೊನ್ನಮ್ಮ ದೇವಿಯ ಅಪ್ಪಣೆ ಮೇರೆಗೆ ಮೊದಲ ಬಾರಿಗೆ ಮುಗೇರ ಜನಾಂಗದವರಿಗೆ ಕೆಂಡಸೇವೆ ನಡೆಯುತ್ತಿದೆ. ದೇವರ ಸಂದರ್ಶನ -ಹೂ ಕಾಯಿ ಸಮರ್ಪಣೆ ಹಾಗೂ ಶ್ರೀ ಕಾಡ್ಯ ದೇವತೆಯ ಅಪ್ಪಣೆ ಮೇರೆಗೆ ಮಧ್ಯಾಹ್ನ ಕೆಂಡಸೇವೆ ನಂತರ ಮಾರಿಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಕೆಂಡ ಸೇವೆಗೆ ಇತರರಿಗೂ ಅವಕಾಶವಿದೆ.

ಉಡುಪಿ ಜಿಲ್ಲೆಯ ಹಳೇ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕಿಗೆ ಸಂಬಂಧಪಟ್ಟ ಏಳು ಸ್ಥಳಗಳಲ್ಲಿ ಕಾಡ್ಯಸ್ಥಾನ ಇದೆ. ಕೊರ್ಗಿ, ಹುಣಸೆಮಕ್ಕಿ ಸಮೀಪದ ಸುಣ್ಣಾರಿ, ನೈಲಾಡಿ, ಚೋರಾಡಿ, ಬೆಳ್ವೆ, ಬೇಳಂಜೆ ಹಾಗೂ ಸೀತಾನದಿಯ ತಟದಲ್ಲಿರುವ ಕಾನ್ಬೆಟ್ಟುಗಳಲ್ಲಿ ಕಾಡ್ಯ ಸ್ಥಾನಗಳಿವೆ.

ಮುಗೇರ ಜನಾಂಗದವರಿಂದಲೇ ಪೂಜೆ

ದೇವಿಗೆ ಮುಗೇರ ಜನಾಂಗದಿಂದಲೇ ಪೂಜೆ ಕಾರ್ಯಗಳು ನಡೆಯುತ್ತದೆ. ಪ್ರತಿ ಸಂಕ್ರಾಂತಿ ಪೂಜೆ, ಮಾರಿಪೂಜೆ ಹಾಗೂ ಕಲಶ ಅರ್ಪಣೆ ಇರುತ್ತದೆ. ಪ್ರಕೃತಿ ಮಾತೆಯಾದ ಕಾರಣ ಪಶುಗಳಿಗೆ, ಸಮರ್ಪಕ ಬೆಳೆಗೆ ಹರಕೆಯನ್ನು ಹೊತ್ತುಕೊಂಡರೆ ಉತ್ತಮ ಫಲ ಸಿದ್ಧಿಸುತ್ತದೆ. ಹಾಗೆಯೇ ಆರೋಗ್ಯ ಸಂಬಂಧಿತ, ಉದ್ಯೋಗ ಅಥವಾ ವೈಯಕ್ತಿಕವಾಗಿ ಬೇಡಿಕೊಂಡಾಗ ದೇವಿ ಅನುಗ್ರಹಿಸುತ್ತಾಳೆ ಎಂಬುದು ಭಕ್ತರ ನಂಬಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net