ಬಿಜೆಪಿ ಎಂಟು, ಕೈ ಬೆಂಬಲಿತ ನಾಲ್ವರಿಗೆ ಜಯ

25-MND- PALA
Published on

ಮುಂಡಗೋಡ: ತಾಲೂಕಿನ ಪಾಳಾ ದೊಡ್ಡ ಪ್ರಮಾಣ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಫಲಿತಾಂಶ ಶನಿವಾರ ರಾತ್ರಿ ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತರು ಎಂಟು ಸ್ಥಾನ ಹಾಗೂ ಕಾಂಗ್ರೆಸ್ ಬೆಂಬಲಿತರು ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಪಾಳಾ ಗ್ರಾಮದ ದೊಡ್ಡ ಪ್ರಮಾಣ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಸಮಿತಿ ಸದಸ್ಯರ ಅವಧಿ ಮುಕ್ತಾಯವಾದ ಕಾರಣ ಶನಿವಾರ ಸಾಲಗಾರ ಕ್ಷೇತ್ರದ ಹನ್ನೊಂದು ಸ್ಥಾನ ಹಾಗೂ ಸಾಲಗಾರರಲ್ಲದ ಒಂದು ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಮತದಾನ ನಡೆಯಿತು. ಪ್ರಭು ಪುಟ್ಟಪ್ಪ ಕಬ್ಬೂರ, ಸುರೇಶ ರಾಮಣ್ಣ ಸುಭಾಂಜಿ, ರಾಮಲಿಂಗ ತಿರಕಪ್ಪ ವಗ್ಗಣ್ಣವರ, ಮದಾರಸಾಬ್ ಮನಿಯಾರ, ಮಂಜುನಾಥ ಅಂಗಡಿ, ಸುರೇಶ ಚಲವಾದಿ, ಕಮಲವ್ವ ಹಂಚಿನಮನಿ, ಸರೋಜಾ ಕೊಡಿಯಾ, ಅಜ್ಜನಗೌಡ ಶಿವನಗೌಡ್ರ, ಸೈಯದಅಮಾನ ಮೈದು, ಮಲ್ಲೇಶಿ ಪುಟ್ಟಪ್ಪ ಶಂಕ್ರಿಕೊಪ್ಪ, ಲಕ್ಷ್ಮಣ ದೇವರಗುಡ್ಡ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರಿ ಸಂಘಗಳ ಅಧಿಕಾರಿ ಶಕ್ತಿಪ್ರಸಾದ ಜಂಬಗಿ, ಸಂಘದ ವ್ಯವಸ್ಥಾಪಕ ಎಸ್.ಎಂ.ಗುತ್ತೆನ್ಣವರ, ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net