ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ

31-MND POLICE
Published on

ಮುಂಡಗೋಡ: ಹದಿನೈದು ದಿನಗಳ ಹಿಂದೆ ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಅಂತರಜಿಲ್ಲಾ ಕಳ್ಳರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಕೊರಚರ ಓಣಿ ನಿವಾಸಿ ರಮೇಶ ಗಂಗಪ್ಪ ಮುಗಳಿಕಟ್ಟಿ (26), ಮಂಜುನಾಥ ಸುಭಾಸ ಸೋಮನಕೋಪ್ಪ (32) ಬಂಧಿತರು.
ಮೇ 16ರಂದು ಕಲಾಲ ಓಣಿಯ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಬೈಕ್ ಮಾಲೀಕ ಪೀರಸಾಬ್ ಅಬ್ದುಲ್‌ಖಾದರ್ ಬಂಗ್ಲೆವಾಲೆ ಎಂಬುವರು ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್‌ಐ ಯಲ್ಲಾಲಿಂಗ ಕನ್ನೂರ, ಸಿಬ್ಬಂದಿ ಮಹ್ಮದಸಲಿಂ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ತಿರುಪತಿ ಚೌಡಣ್ಣವರ, ಬಸವರಾಜ ಲಮಾಣಿ, ಶಂಭುಲಿಂಗ ಜಾವೂರ, ಅನ್ವರ ಬಮ್ಮಿಗಟ್ಟಿ, ಪ್ರಕಾಶ ಶೃಂಗೇರಿ, ಅಣ್ಣಪ್ಪ ಶಿಗ್ಗಾಂವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net