ಏರ್‌ವಾಲ್ವ್ ಸಡಿಲು ಅಪಾರ ನೀರು ಪೋಲು

11-MDG-4 NEERU
Published on

ಮುಂಡರಗಿ: ತಾಲೂಕಿನ ಬರದೂರ ಗ್ರಾಮದ ಸಮೀಪದ ಜಮೀನೊಂದರಲ್ಲಿ ಬುಧವಾರ ಬೆಳಗಿನ ಜಾವ ಸಿಂಗಟಾಲೂರು ಬ್ಯಾರೇಜ್‌ನಿಂದ ಗದಗ ನಗರಕ್ಕೆ ನಿರಂತರವಾಗಿ ಪೂರೈಸುವ ಕುಡಿಯುವ ನೀರಿನ ಪೈಪ್‌ನ
ಏರ್‌ವಾಲ್ವ್ ಸಡಿಲವಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ.
ಬರದೂರ ಗ್ರಾಮದ ರೈತ ಪರಮೇಶ ಕವಲೂರ ಅವರ ಜಮೀನಿನಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್‌ನಿಂದ ನೀರು ಪೋಲಾಗಿದೆ. ಮೊದಲೇ ಮಳೆ ಇಲ್ಲದೆ ಕುಡಿಯುವ ನೀರಿನ ಕೊರತೆಯಾಗುವ ಮುನ್ಸೂಚನೆ ಇದೆ. ಇಂತಹ ಸಂದರ್ಭದಲ್ಲಿ ಈ ರೀತಿಯಾಗಿ ಕುಡಿಯುವ ನೀರು ಪೋಲಾದರೆ ಹೇಗೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನೀರು ಹರಿದಿದ್ದರಿಂದ ಅಂದಾಜು 4 ಎಕರೆ ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆಯಲ್ಲಿ 1 ಎಕರೆಗೂ ಹೆಚ್ಚು ಬೆಳೆ ಹಾಳಾಗಿದೆ. ಮಳೆ ಇಲ್ಲದ್ದರಿಂದ ಅಲ್ಪಸ್ವಲ್ಪ ಬೆಳೆ ಬಂದಿದ್ದು, ಈಗ ಅದೂ ಹಾಳಾಗಿದೆ. ಸಂಬಂಧಿಸಿದವರು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಪರಮೇಶ ಒತ್ತಾಯಿಸಿದರು. ಈ ಬಗ್ಗೆ ಮಾಹಿತಿ ತಿಳಿದ ನಂತರ ಗದಗ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪೈಪ್‌ನ ಏರ್‌ವಾಲ್ವ್ ದುರಸ್ತಿ ಕಾರ್ಯ ನಡೆಸಿ ನೀರು ಪೋಲಾಗುವುದನ್ನು ತಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net