ಮುಂಡರಗಿ ಪಟ್ಟಣದ ಅಭಿವೃದ್ಧಿಗೆ ಆದ್ಯತೆ

12MDG2
Published on

ಮುಂಡರಗಿ: ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ‘ಸ್ಥಳೀಯ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿ, ಸುಂದರ ಪಟ್ಟಣವನ್ನಾಗಿಸಲು ಶ್ರಮಿಸಲಾಗುವುದು. ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದರು.

ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ, ಶಾಂತವ್ವ ಕರಡಿಕೊಳ್ಳ, ನಿರ್ಮಲಾ ಕೊರ್ಲಹಳ್ಳಿ, ಟಿ.ಬಿ. ದಂಡಿನ, ಪ್ರಲ್ಹಾದ ಹೊಸಮನಿ, ಪ್ರಕಾಶ ಹಲವಾಗಲಿ, ಶಿವಾನಂದ ಬಾರಕೇರಿ, ರಾಜಾಭಕ್ಷಿ ಬೆಟಗೇರಿ, ಸಂತೋಷ ಹಿರೇಮನಿ, ಅಂದಪ್ಪ ಉಳ್ಳಾಗಡ್ಡಿ, ನಾಗರಾಜ ಹಾನಗಲ್ಲ, ಪರುಶುರಾಮ ಕರಡಿಕೊಳ್ಳ, ಅಂದಪ್ಪ ಬಳ್ಳಾರಿ, ಕಿಟ್ಟಪ್ಪ ಮೋರನಾಳ, ಮುಖ್ಯಾಧಿಕಾರಿ ಎನ್.ಕೆ. ಡೊಂಬರ, ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net