

ವಿಜಯವಾಣಿ ಸುದ್ದಿಜಾಲ ಮುಂಡರಗಿ,
ಸಮಾಜದಲ್ಲಿ ಗಂಡು ಮೇಲು, ಹೆಣ್ಣು ಕೀಳು ಎನ್ನುವ ಭಾವನೆಯಿಂದ ಹೊರಬೇಕು. ಇತ್ತೀಚಿನ ದಿನಗಳಲ್ಲಿ ಲಿಂಗತಾರತಮ್ಯ ಹೆಚ್ಚಾಗುತ್ತಿದ್ದು, ಲಿಂಗ ತಾರತಮ್ಯವನ್ನು ತಡೆಗಟ್ಟಬೇಕು. ಸ್ತಿçÃಭ್ರೂಣ ಹತ್ಯೆ ನಿಯಂತ್ರಿಸದಿದ್ದರೇ ಮುಂದೆ ಗಂಡು-ಹೆಣ್ಣುಗಳ ಮಧ್ಯೆ ತುಂಬಾ ವ್ಯತ್ಯಾಸ ಸೃಷ್ಟಿಯಾಗಿ ಸಾಮಾಜಿಕ ಅಸಮತೋಲನೆ ಉಂಟಾಗುವುದು ಎಂದು ವೈದ್ಯೆ ಡಾ.ಪ್ರಿಯದರ್ಶಿನಿ ಮೇಟಿ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ವೀರಭದ್ರೇಶ್ವರ ಮಹಿಳಾ ವೇದಿಕೆ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಟುಂಬ ನಿರ್ವಹಣೆ ಸೇರಿದಂತೆ ಮಧ್ಯವಯಸ್ಕ ಮಹಿಳೆಯರು ಹಲವಾರು ದೈಹಿಕ ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಮಧ್ಯವಯಸ್ಕ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಮೊದಲಾದ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮಹಿಳೆಯರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಹಾಗೆಯೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಯೋಗ ಶಿಕ್ಷಕಿ ಡಾ.ಮಂಗಳಾ ಇಟಗಿ ಮಾತನಾಡಿ, ಆಹಾರ ಪದ್ಧತಿ, ಕೆಲಸದ ಒತ್ತಡಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಯೋಗ, ಪ್ರಾಣಾಯಾಮ, ಧ್ಯಾನ, ಪ್ರಾರ್ಥನೆ ಮಾಡುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಹೇಳಿದರು.
ಶ್ರೀ ವೀರಭದ್ರೇಶ್ವರ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರಭಾವತಿ ಕುಬಸದ ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ಬಿ.ಹಿರೇಗೌಡರ ಮಾತನಾಡಿದರು.
ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ಲಿಂಬಿಕಾಯಿ, ವಿ.ಜೆ.ಹಿರೇಮಠ, ಎಂ.ಬಿ.ಗದಗ, ನಂಜುAಡೇಶ ಲಿಂಬಿಕಾಯಿ, ಈರಣ್ಣ ಕರ್ಜಗಿ, ರವೀಂದ್ರಗೌಡ ಪಾಟೀಲ, ಅಜ್ಜಪ್ಪ ಲಿಂಬಿಕಾಯಿ, ರೋಹಿಣಿ ಕುಬಸದ, ದೀಪಾ ಕುರಡಗಿ, ಅನ್ನಪೂರ್ಣಾ ಬೆಲ್ಲದ, ಶಶಿಕಲಾ ಅಂಗಡಿ, ಹೇಮಾ ನಾಡಗೌಡ್ರ, ಶಕುಂತಲಾ ಪಾಟೀಲ, ರೇಖಾ ಹಿರೇಮಠ, ಅಮೃತಾ ಲಿಂಬಿಕಾಯಿ, ಗಿರಿಜಾ ಅಂಗಡಿ, ಉಮಾ ಕೊಪ್ಪಳ ಮತ್ತಿತರರು ಇದ್ದರು.
ಲತಾ ಕಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಲೀಲಾ ಅಕ್ಕೂರ ಸರ್ವರನ್ನು ಸ್ವಾಗತಿಸಿದರು. ಕಲ್ಪನಾ ಕಡ್ಡಿ ನಿರೂಪಿಸಿದರು. ರೇಖಾ ಹುಲ್ಲೂರ ವಂದಿಸಿದರು.
೨೪ಎAಡಿಜಿ೩ ಮಹಿಳಾ ದಿನಾಚರಣೆ ಫೋಟೋ ಶೀರ್ಷಿಕೆ: ಮುಂಡರಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಹಾಗೂ ಮಹಿಳಾದಿನಾಚರಣೆ ಕಾರ್ಯಕ್ರಮವನ್ನು ವೈದ್ಯೆ ಡಾ.ಪ್ರಿಯದರ್ಶಿನಿ ಮೇಟಿ ಉದ್ಘಾಟಿಸಿದರು. ಪ್ರಭಾವತಿ ಕುಬಸದ, ಡಾ.ಮಂಗಳಾ ಇಟಗಿ, ಕಲ್ಪನಾ ಕಡ್ಡಿ ಇದ್ದರು.
೨೪ಎಂಡಿಜಿ೩ಎ ಮಹಿಳಾ ದಿನಾಚರಣೆ ಫೋಟೋ ಶೀರ್ಷಿಕೆ: ಮುಂಡರಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯೆ ಡಾ.ಪ್ರಿಯದರ್ಶಿನಿ ಮೇಟಿ ಅವರನ್ನು ಸನ್ಮಾನಿಸಲಾಯಿತು. ಪ್ರಭಾವತಿ ಕುಬಸದ, ಡಾ.ಮಂಗಳಾ ಇಟಗಿ, ಕಲ್ಪನಾ ಕಡ್ಡಿ ಇತರರಿದ್ದರು.