ಅಂಬಾಭವಾನಿ ದೇವಿಗೆ ಕಿರೀಟ ಧಾರಣೆ 15ರಂದು

11-MDG- AMMBABHAVANI
Published on

ಮುಂಡರಗಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ಪಂಚ ಟ್ರಸ್ಟ್ ಕಮಿಟಿ, ತರುಣ ಮಿತ್ರ ಮಂಡಳಿ, ಮಹಿಳಾ ಮಂಡಳಿ ಹಾಗೂ ಸರ್ವ ಭಕ್ತ ಸಮೂಹ, ನಾಗರಿಕ ವೇದಿಕೆ ಹಾಗೂ ವಿವಿಧ ಕಮಿಟಿಗಳ ಆಶ್ರಯದಲ್ಲಿ ಅ. 15ರಂದು ಶ್ರೀ ಅಂಬಾಭವಾನಿ ದೇವಿಗೆ ಬಂಗಾರದ ಕಿರೀಟ ಧಾರಣೆ ಹಾಗೂ ದಸರಾ ಉತ್ಸವದ ಘಟಸ್ಥಾಪನೆ ಕಾರ್ಯಕ್ರಮ ಏರ್ಪಾಟಾಗಿದೆ ಎಂದು ಎಸ್‌ಎಸ್‌ಕೆ ಸಮಾಜದ ತಾಲೂಕು ಅಧ್ಯಕ್ಷ ಅಶೋಕಸಾ ಶಿದ್ಲಿಂಗ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 15ರಂದು ಬೆಳಗ್ಗೆ 8 ಗಂಟೆಗೆ ಪಂಚಾಮೃತ ಅಭಿಷೇಕ, ಹೋಮ-ಹವನ, ವಿಶೇಷ ಅಲಂಕಾರ ನೆರವೇರಲಿದೆ. ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಆನೆ ಮೇಲೆ ಮಂಟಪದಲ್ಲಿ ದೇವಿಯ ಬಂಗಾರದ ಕಿರೀಟವನ್ನು ಕುಂಭಮೇಳ, ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆ ಮಾಡಲಾಗುವುದು ಎಂದರು.
ಎಸ್‌ಎಸ್‌ಕೆ ಸಮಾಜದ ಕಾರ್ಯದರ್ಶಿ ದೇವೇಂದ್ರಸಾ ಮಗಜಿ ಮಾತನಾಡಿ, ಅ. 15ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12ರೊಳಗೆ ಬಂಗಾರದ ಕಿರೀಟ ಧಾರಣೆ ಕಾರ್ಯಕ್ರಮ ನಡೆಯಲಿದೆ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹಾಗೂ ಶ್ರೀ ಪ್ರಣವಾನಂದತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮಾಜದ ಅಧ್ಯಕ್ಷ ಅಶೋಕಸಾ ಶಿದ್ಲಿಂಗ ಅಧ್ಯಕ್ಷತೆ ವಹಿಸುವರು. ದೇವೇಂದ್ರಸಾ ಮಗಜಿ, ಶಾಸಕ ಡಾ. ಚಂದ್ರು ಲಮಾಣಿ, ಹನುಮಂತಸಾ ನಿರಂಜನ, ಶ್ರೀಕಾಂತಸಾ ಖಟವಟೆ ಪಾಲ್ಗೊಳ್ಳುವರು ಎಂದರು.
ಅ. 16ರಿಂದ 24ರವರೆಗೆ ದಸರಾ ಉತ್ಸವ ನಿಮಿತ್ತ ದೇವಸ್ಥಾನದಲ್ಲಿ ಪ್ರತಿದಿನ ಪೂಜೆ, ಉಡಿ ತುಂಬುವ ಕಾರ್ಯಕ್ರಮ ಹಾಗೂ ಸಂಜೆ ದೇವಿಯ ಪುರಾಣ ಜರುಗಲಿದ್ದು, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಾಲಚಂದಸಾ ಹಾದಿಮನಿ, ಸ್ವಾಮಿಸಾ ಪವಾರ, ಗಣೇಶ ಮಗಜಿ, ರಾಘವೇಂದ್ರ ಹಾದಿಮನಿ, ರಾಘು ಬಾಕಳೆ, ಸೋಮನಾಥಸಾ ಶಿದ್ಲಿಂಗ್, ರವಿ ಶಿದ್ಲಿಂಗ್, ಶಂಕರ ಬಾಕಳೆ, ಅಪ್ಪು ಖಟವಟೆ, ರಾಘು ಬದಿ, ವೆಂಕಟೇಶ ಬಾಕಳೆ, ರಾಧಕೃಷ್ಣಸಾ ಮೇಹರ್‌ವಾಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net