

ಮುಂಡರಗಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೆ. 16ರಂದು ಪುರುಷ ಹಾಗೂ ಮಹಿಳೆಯರಿಗೆ 2023-24ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಸೆ. 14ರೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಬಿ. ಹುಡೇದ ಅವರ ಬಳಿ ತಮ್ಮ ಹೆಸರು ನೋಂದಾಯಿಸಬೇಕು. ಸೆ. 16ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ನೋಂದಾಯಿತ ಯುವಕ, ಯುವತಿ ಸಂಘಗಳು ಮಾತ್ರ ಗುಂಪು ಆಟಗಳಲ್ಲಿ ಭಾಗವಹಿಸಲು ಅವಕಾಶವಿದೆ.
ಪುರುಷರ ವಿಭಾಗದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳು: 100 ಮೀ., 200 ಮೀ., 400 ಮೀ., 800 ಮೀ., 1,500 ಮೀ., 5,000 ಮೀ., 10,000 ಮೀ., ಓಟ ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್, ಗುಂಡು ಎಸೆತ ಜಾವಲಿನ್ ಎಸೆತ, ಚಕ್ರ ಎಸೆತ, 110 ಮೀ. ಹರ್ಡಲ್ಸ್, 4ಗಿ100ಮೀ.. ರಿಲೇ, 4ಗಿ400 ಮೀ. ರಿಲೇ. ಗುಂಪು ಸ್ಪರ್ಧೆ: ವಾಲಿಬಾಲ್, ಕಬಡ್ಡಿ, ಖೋಖೋ, ಥ್ರೋ ಬಾಲ್, ಫುಟ್‌ಬಾಲ್, ಯೋಗ.
ಮಹಿಳೆಯರ ವಿಭಾಗದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆ: 100 ಮೀ., 200 ಮೀ., 400 ಮೀ., 800 ಮೀ., 1,500 ಮೀ., 3,000 ಮೀ.. ಓಟ ಉದ್ದ ಜಿಗಿತ ಎತ್ತರ ಜಿಗಿತ, ಟ್ರಿಪಲ್ ಜಂಪ್, ಗುಂಡು ಎಸೆತ, ಜಾವಲಿನ್ ಎಸೆತ, ಚಕ್ರ ಎಸೆತ, 100 ಮೀ. ಹರ್ಡಲ್ಸ್, 4ಗಿ100 ಮೀ., ರಿಲೇ 4ಗಿ400 ಮೀ. ರಿಲೇ. ಗುಂಪು ಸ್ಪರ್ಧೆ: ವಾಲಿಬಾಲ್, ಕಬಡ್ಡಿ, ಖೋಖೋ, ಥ್ರೋ ಬಾಲ್, ಯೋಗ ಸ್ಪರ್ಧೆಗಳು ನಡೆಯಲಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.