

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಬಳಿಯ ಆದರ್ಶ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ 14ರಿಂದ 17ವರ್ಷದೊಳಗಿನ ಬಾಲಕ-ಬಾಲಕಿಯರ 2023-24ನೇ ಸಾಲಿನ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲೆ ಬಾಲಕರ ವಿಭಾಗ: ಸ್ಥಳೀಯ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಾಧಿಕ್ ನದಾಫ್, ಅಲ್ಲಾಭಕ್ಷ ಕುಂದಗೋಳ, ರಫೀಕ ಮುಳಗುಂದ, ಜೆ.ಎ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಿಖಿಲ ಕೋಡೆ, ಕೊರ್ಲಹಳ್ಳಿ ಆದರ್ಶ ವಿದ್ಯಾಲಯದ ನಿಂಗಪ್ಪ ಗೊಂಡೆದ.
ಪ್ರೌ.ಶಾ.ಬಾಲಕಿಯರ ವಿಭಾಗ: ಸ್ಥಳೀಯ ಜೆ.ಎ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನಂದಿನಿ ಕೋಡೆ, ವಿ.ಜಿ. ಲಿಂಬಿಕಾಯಿ ಪ್ರೌಢಶಾಲೆಯ ಶ್ರೀದೇವಿ ಚೌಡಾಳ, ಪೂರ್ಣಿಮಾ ಗಣಪ್ಪನವರ, ವೀಣಾ ಚವಡಾಳ, ಎಸ್‌ಎಫ್‌ಎಸ್ ಪ್ರೌಢಶಾಲೆಯ ವರ್ಷಿಣಿ ಪಾಟೀಲ.
ಪ್ರಾಥಮಿಕ ಶಾಲೆ ಬಾಲಕರ ವಿಭಾಗ: ಕೊರ್ಲಹಳ್ಳಿ ಆದರ್ಶ ವಿದ್ಯಾಲಯದ ಮಹಮ್ಮದಶೇಖ್ ಕಾಸೀಮ್, ತೇಜರಾಜಗೌಡ ಗೌಡರ. ಸ್ಥಳೀಯ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರೇಮಕುಮಾರ ಎಚ್., ವೀರೇಶ ನೂಕಾಪುರ, ಮಂಜುನಾಥ ಬೂತ್ತಾಳಿ.
ಪ್ರಾ.ಶಾ. ಬಾಲಕಿಯರ ವಿಭಾಗ: ಕೊರ್ಲಹಳ್ಳಿ ಆದರ್ಶ ವಿದ್ಯಾಲಯದ ಭುವನೇಶ್ವರಿ ಕೊಪ್ಪಣ್ಣವರ, ಸಮೀಕ್ಷಾ ಮೇಗಲಮನಿ, ಸುಧಾ ನಾಯಕ, ಎಸ್‌ಎಫ್‌ಎಸ್ ಪ್ರೌಢಶಾಲೆಯ ಮಧುಪ್ರೀಯಾ ಎಸ್.ವೈ., ಎಸ್‌ವಿಎಸ್ ಪ್ರೌಢಶಾಲೆಯ ಸಲ್ಮಾಬೇಗಂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಆದರ್ಶ ವಿದ್ಯಾಲಯದ ಪ್ರಭಾರಿ ಮುಖ್ಯಶಿಕ್ಷಕಿ ಕೆ.ಆರ್. ಹಂಸವಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.