ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

9-MDG- KRIDAKUTA
Published on

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರೌಢಶಾಲೆ ವಿಭಾಗದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ತಾಲೂಕಿನ ಜಂತ್ಲಿಶಿರೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಭೀಮವ್ವ ಬೆಳವಟಗಿ ಸರಪಳಿ, ಗುಂಡು ಎಸೆತದಲ್ಲಿ ಪ್ರಥಮ, ಹನುಮವ್ವ ಕೂಲಿ ತ್ರಿವಿಧ ಜಿಗಿತದಲ್ಲಿ ಪ್ರಥಮ, ಸರಪಳಿ, ಗುಂಡು ಎಸೆತದಲ್ಲಿ ದ್ವಿತೀಯ, ಬಸವರಾಜ ಶಿರುಂದ 1,500 ಮೀ. ಮತ್ತು 3,000 ಮೀ. ಓಟದಲ್ಲಿ ಪ್ರಥಮ, ಸಂಜನಾ ಧರಣಿ 110 ಮೀ. ಅಡೆತಡೆ ಓಟದಲ್ಲಿ ಪ್ರಥಮ, ಸ್ನೇಹಾ ಸಾವಂತ್ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಹಾಗೂ ಸೈಯದ್‌ಭಾಷಾ ಬಳಿಗಾರ 5,000 ಮೀ.ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net