ಕಾತೂರ ಸಮೀಪ ವಾಹನ ಪಲ್ಟಿ

26-mnd-pluty
Published on

ಮುಂಡಗೋಡ: ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದ ಘಟನೆ ತಾಲೂಕಿನ ಕಾತೂರ ಸಮೀಪದ ಮಂಗಳವಾರ ರಾತ್ರಿ ಸಂಭವಿಸಿದೆ. ಮುಂಡಗೋಡನಿಂದ ಕಾತೂರಿನತ್ತ ಹೊರಟಿದ್ದ ಟಾಟಾ ಪಿಕ್‌ಅಪ್ ಗೂಡ್ಸ್ ವಾಹನ ಪಲ್ಟಿಯಾಗಿದ್ದು, ಚಾಲಕ ಶಶಿಧರ ಜೋಗಿ, ಕೃಷ್ಣ ಪಾಟೀಲ ಎಂಬುವರು ಗಾಯಗೊಂಡಿದ್ದಾರೆ. ವಾಹನ ಬಿದ್ದ ತಕ್ಷಣ ಕ್ಲೀನರ್ ಹೊರ ಬಂದಿದ್ದಾನೆ. ಆದರೆ, ಚಾಲಕ ಕೆಲ ಹೊತ್ತು ವಾಹನದಲ್ಲಿಯೇ ಸಿಲುಕಿಕೊಂಡಿದ್ದ. ಹೊರ ಬರಲು ಸಾಧ್ಯವಾಗದ ಕಾರಣ ಸ್ಥಳೀಯರು ಕಟರ್ ಯಂತ್ರದ ಮೂಲಕ ಬಾಗಿಲು ಕೊರೆದು ಚಾಲಕನನ್ನು ಹೊರ ತೆಗೆದರು. ಕಟರ್‌ನಿಂದ ಬಾಗಿಲು ಕಟ್ ಮಾಡುವಾಗ ಕಟರ್ ತಾಗಿದ್ದರಿಂದ ಸತೀಶ ಕತಗಾರ ಎಂಬುವರ ಕಾಲಿಗೆ ಗಾಯವಾಗಿದೆ. 108 ವಾಹನದ ಸಿಬ್ಬಂದಿ ಗಾಯಾಳಿಗೆ ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net