ನಾಯಿ ದಾಳಿಯಿಂದ ಜಿಂಕೆ ರಕ್ಷಣೆ

25-mnd jinke
Published on

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಗೊಳಗಾದ ಜಿಂಕೆ ಮರಿಯನ್ನು ಸ್ಥಳೀಯರು ರಕ್ಷಿಸಿ ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಆಹಾರ ಅರಸಿ ಕಾಡಿನಿಂದ ಸನವಳ್ಳಿ ಕಡೆಗೆ ಬಂದಿದ್ದ ಜಿಂಕೆಗಳ ಹಿಂಡಿನಿಂದ ತಪ್ಪಿಸಿಕೊಂಡಿದ್ದ ಜಿಂಕೆ ಮರಿ ಮೇಲೆ ನಾಯಿಗಳು ದಾಳಿ ಮಾಡಿವೆ. ಸನಿಹದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯರಾದ ಕಿರಣ ಗುಬ್ಬಕ್ಕನವರ, ಶರೀ ಆರೆಗೋಪ್ಪ,ಪರಶುರಾಮ ಮಟ್ಟಿಮನಿ, ಮಲ್ಲಯ್ಯ ಹಿರೇಮಠ, ರಾಜು ಕಲಕೇರಿ, ರುದ್ರಪ್ಪ ಅಂದಲಗಿ ಹಾಗೂ ಕೋಣನಕೇರಿ ಎಂಬುವರು ಜಿಂಕೆ ಮರಿ ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ನಾಯಿಗಳು ಜಿಂಕೆಯ ಕಾಲು, ಹೊಟ್ಟೆ ಹಾಗೂ ತೋಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿವೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿ ಆಗಮಿಸಿ ಜಿಂಕೆ ಮರಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net