

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರಸಭೆಯ ಕಚೇರಿಯ ಕಿಟಕಿಯ ಮೇಲೆ ಮರವನ್ನು ಬೆಳೆಸುವ ಮೂಲಕ ಅಧಿಕಾರಿಗಳು ಅಪಹ್ಯಾಸಕ್ಕೀಡಾಗಿದ್ದಾರೆ.
ಹೌದು! ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಶಾಖೆ ಮತ್ತು ವಿವಿಧ ವಿಭಾಗಗಳ ಇಂಜಿನಿಯರ್ ಗಳು ಕೆಲಸ ನಿರ್ವಹಿಸುವ ಕಟ್ಟಡದ ಕಿಟಕಿಯ ಕಾಂಕ್ರಿಟ್ ಸರ್ಜಾ ಮೇಲೆ ಮರವೊಂದು ಬೆಳೆದು, ನಿರ್ವಹಣೆಯ ವೈಖರಿಯನ್ನು ಎತ್ತಿ ತೋರಿಸಿದೆ ಎಂದು ಸ್ಥಳೀಯರು ಚಿಂತಾಮಣಿ ನಗರಸಭೆ ಬಗ್ಗೆ ವ್ಯಂಗ್ಯವಾಡಿದ್ದು ಇದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದಂತೆ ತೆರವುಗೊಳಿಸಲಾಗಿದೆ.
ಮರ ಬೆಳೆಯುವುದರಿಂದ ಸರ್ಜಾ ಕುಸಿತ, ಕಟ್ಟಡದ ಗೋಡೆ ಸಹ ಬಿರುಕು ಬಿಟ್ಟು ಅನಾಹುತ ಸಂಭವಿಸುವ ಸಾಧ್ಯತೆಯ ಬಗ್ಗೆ ಅರಿವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಇನ್ನು ಇದೇ ರಸ್ತೆಯಲ್ಲಿ ನಗರಸಭೆಯ ಸದಸ್ಯರು ಪ್ರತಿನಿತ್ಯ ಓಡಾಡುತ್ತಿದ್ದರೂ ತಲೆ ಕೆಡಿಸಿಕೊಂಡಿರಲಿಲ್ಲ. ಇದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.