

ಮುನವಳ್ಳಿ: ಪಟ್ಟಣದ ಶ್ರೀಸೋಮಶೇಖರ ಮಠದ ಪೀಠಾಧಿಪತಿ ಮುರುಂದ್ರ ಸ್ವಾಮೀಜಿ 51ನೇ ಜನ್ಮದಿನದ ಅಂಗವಾಗಿ 60 ಜನ ಹಿರಿಯರಿಗೆ ಊರುಗೋಲು ವಿತರಣೆ, ಬಡ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ, ಶಾಲಾ ಶುಲ್ಕ ವಿತರಣೆ ಹಾಗೂ ಗುರುವಂದನೆ ಕಾರ್ಯಕ್ರಮ ಜೂ.10ರಂದು ಬೆಳಗ್ಗೆ 10.30ಕ್ಕೆ ಶ್ರೀ ಮಠದ ಸಭಾಂಗಣದಲ್ಲಿ ಜರುಗಲಿದೆ. ಮುರಗೋಡದ ನೀಲಕಂಠ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾ ಸ್ವಾಮೀಜಿ, ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಅಮೀನಗಡದ ಪ್ರಭುಶಂಕರರಾಜೇಂದ್ರ ಸ್ವಾಮೀಜಿ, ಕುಂದರಗಿಯ ಡಾ.ಅಮರಸಿದ್ದೇಶ್ವರ ಸ್ವಾಮೀಜಿ, ಬೈಲಹೊಂಗಲದ ಪ್ರಭುನೀಲಕಂಠ ಶ್ರೀಗಳು, ಚಿಕ್ಕಲಪರ್ವಿಯ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸುವರು. ಮುರುಂದ್ರ ಸ್ವಾಮೀಜಿಗಳಿಂದ ಗುರುವಂದನೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.