

ವಿಜಯಪುರ: ಭಾರತರತ್ನ ಡಾ. ಅಂಬೇಡ್ಕರ್‌ರ ಮುಂಬೈನ ನಿವಾಸದ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಜಿಲ್ಲಾ ಸಮಿತಿ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಮೂಲಕ ಬುಧವಾರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜು ಕಂಬಾಗಿ ಮಾತನಾಡಿ, ಇಂತಹ ಘಟನೆಗಳು ಮರುಕಳಿಸಿದಂತೆ ಮಹಾರಾಷ್ಟ್ರ ಸರ್ಕಾರ ಕ್ರಮಕೈಗೊಳ್ಳುವಂತೆ ಆದೇಶಿಸಬೇಕು. ಇಂತಹ ಘಟನೆಗಳು ಮರುಕಳಿಸಿದ್ದೇ ಆದಲ್ಲಿ ರಾಷ್ಟ್ರಾದ್ಯಂತ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಜಿತೇಂದ್ರ ಕಾಂಬಳೆ ಮಾತನಾಡಿ, ವಿಜಯಪುರ ಜಿಲ್ಲೆಯ ತಾಳಿಕೊಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ದಲಿತ ಯುವಕ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಖಂಡಿಸುವುದಾಗಿ ಹೇಳಿದರು.
ತಾಲೂಕು ಪ್ರಧಾನ ಸಂಚಾಲಕ ಚಂದ್ರು ದ್ಯಾಬೇರಿ, ನಗರ ಘಟಕದ ಸಂಚಾಲಕ ಶಂಕರ ಚಲವಾದಿ, ಸೋಮು ರಣದೇವಿ, ಸತೀಶ ನಾಟೀಕಾರ, ಶ್ರೀನಾಥ ಹೊಸಕೋಟಿ, ಭಾಸ್ಕರ್ ಬೋರಗಿ, ಚೇತನ ತೊರವಿ, ಗಣೇಶ ರಣದೇವಿ, ಮಾತಂಗ ಸಮಾಜದ ಯುವಕು ಉಪಸ್ಥಿತರಿದ್ದರು.