

ಬಸವಕಲ್ಯಾಣ: ಸಾಹಿತ್ಯ ಸಾಮ್ರಾಟ್ ಅಣ್ಣಾಭಾವು ಸಾಠೆ ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಪ್ರೇರಣೆ ಪಡೆದು ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದು ಮುಂಬೈನ ಸಾಹಿತಿ ವಿಜಯಕುಮಾರ ಸೂರ್ಯವಂಶಿ ಹೇಳಿದರು.
ತಳಭೋಗ ಗ್ರಾಮದಲ್ಲಿ ಲೋಕಶಾಹಿರ, ಸಾಹಿತ್ಯ ಸಾಮ್ರಾಟ್ ಡಾ.ಅಣ್ಣಾಭಾವು ಸಾಠೆ ಅವರ ೧೦೪ನೇ ಜಯಂತಿ ನಿಮಿತ್ತ ಭಾರತೀಯ ಪರಿವರ್ತನ ಮರಾಠಿ ಸಾಹಿತ್ಯ ಪರಿಷತ್ ಕರ್ನಾಟಕ ಮತ್ತು ಅಣ್ಣಾಭಾವು ಸಾಠೆ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಬಹುಭಾಷಾ ಕವಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಾಠೆ ಅವರ ಸಾಹಿತ್ಯ ಓದಿದರೆ ತಾನಾಗಿಯೇ ಹೋರಾಟ ಮನೋಭಾವ ಬೆಳೆಯುತ್ತದೆ ಎಂದರು.
ಸಮಾಜದ ವಾಸ್ತವ ಪರಿಸ್ಥಿತಿ ಜಗತ್ತಿಗೆ ತೋರಿಸಿದ ಸಾಠೆ ಸಾಹಿತ್ಯದ ಮೂಲಕ ಜನರನ್ನು ಜಾಗೃತಗೊಳಿಸುವ ಜತೆಗೆ ಸರ್ಕಾರಕ್ಕೆ ಎಚ್ಚರಿಸಿದ್ದರು. ಬಡವರು ಬಡವರಾಗಿಯೇ ಏಕೆ ಉಳಿದಿದ್ದಾರೆ ಎಂದು ವ್ಯವಸ್ಥೆಯನ್ನು ಪ್ರಶ್ನಿಸಿದ್ದರು. ಅವರ ಸಾಹಿತ್ಯಕ್ಕೆ ಭಾಷೆ, ಪ್ರಾಂತದ ಗಡಿ ಇಲ್ಲ. ಸೀಮಾತೀತ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನುಲಿಯ ಚಂದಯ್ಯ ಗವಿಮಠದ ಪೂಜ್ಯ ಚಿತ್ರಮ್ಮತಾಯಿ, ಅಧ್ಯಕ್ಷತೆ ವಹಿಸಿದ್ದ ಗುಂಜಟ್ಟಿಯ ಚಿಂತಕ ವಿಷ್ಣು ಖಂಡಾಗಳೆ, ನಿವೃತ್ತ ಪ್ರಾಚಾರ್ಯ ಎಂಎಂ ತಂಬಾಕೆ, ಕಾಕನಾಳನ ಸುಧಾಕರ ಸೂರ್ಯವಂಶಿ ಮಾತನಾಡಿದರು.
ಭಾರತಿಯ ಪರಿವರ್ತನ ಮರಾಠಿ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸೂರ್ಯಕಾಂತ ಸಸಾನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ನಿವೃತ್ತ ಮುಖ್ಯಗುರು ಶಂಕರರಾವ ಗುರೂಜಿ ನೇತೃತ್ವ ವಹಿಸಿದ್ದರು. ಶಾಸಕ ಶರಣು ಸಲಗರ ಸಮ್ಮೇಳನ ಉದ್ಘಾಟಿಸಿದರು. ಹೊನ್ನಾನಾಯಕ ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಾಬು ಹೊನ್ನಾನಾಯಕ, ನಿವೃತ್ತ ಮುಖ್ಯಗುರು ಧೂಳಪ್ಪ, ಪ್ರಮುಖರಾದ ಮಾರುತಿ ಸೂರ್ಯವಂಶಿ, ಮುಂಬೈನ ಶಿವಾಜಿ ಭೋಸಲೆ, ಧನಂಜಯ ಜಾಧವ್, ಗುರುನಾಥ ಸೋನಕೆ, ರಮೇಶ ಕಾಂಬಳೆ, ಲಕ್ಷ್ಮೀಬಾಯಿ ಪಾಟೀಲ್, ಅಶೋಕ ಢಗಳೆ, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಶಾಮ ಸಸಾನೆ, ಉಪಾಧ್ಯಕ್ಷ ಸಚಿನ ಸೋನಕೆ, ಕಾರ್ಯಾಧ್ಯಕ್ಷ ವಿನಯಕುಮಾರ ಸಸಾನೆ, ಉಪ ಖಜಾಂಚಿ ಸಕೇಶ ಗಾಯಕವಾಡ ಇತರರಿದ್ದರು. ಹುಸೇನ ಧೋತ್ರೆ ನಿರೂಪಣೆ ಮಾಡಿದರು. ಖಜಾಂಚಿ ವಿಷ್ಣು ಜೊಗದಂಡೆ ವಂದಿಸಿದರು. ಕುಮಾರಿ ಅಂಕಿತಾ ಗವಾರೆ ಸ್ವಾಗತ ಗೀತೆ ಹಾಡಿದರು.
ಕವಿಗೋಷ್ಠಿ: ಬಹುಭಾಷಾ ಕವಿ ಸಮ್ಮೇಳನದಲ್ಲಿ ಅಮೃತ ಆಕರೆ, ತಾನಾಜಿ ಸಾವರೆ, ಕೇಶವ ತಪಸಾಲ, ಆನಂದ ಜಾಧವ, ರವಿದಾಸ ಕುರುಬಖೇಳಗಿ, ಪ್ರಭಾವತಿ ಸೂರ್ಯವಂಶಿ, ಅಜಯ ಕೊಟಮಾಳ, ಪ್ರದೀಪ ಶಿಂಧೆ, ಅಶೋಕ ಪಾಟೀಲ್, ರತನ ಸೂರ್ಯವಂಶಿ ಮೊದಲಾದ ಕವಿಗಳು ತಮ್ಮ ಕವನ ವಾಚಿಸಿದರು.