ಬಹುಶಿಸ್ತೀಯ ಅಧ್ಯಯನ ಇಂದಿನ ಅಗತ್ಯ

5 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾಥಿರ್ಗಳು ಜ್ಞಾನ, ಸಾಮರ್ಥ್ಯ ಹಾಗೂ ಕೌಶಲ ಬೆಳೆಸಿಕೊಳ್ಳಲು ಬಹುಶಿಸ್ತೀಯ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಶಿಣ ವ್ಯವಸ್ಥೆಯಲ್ಲೂ ಇದರ ಅಳವಡಿಕೆ ಅಗತ್ಯ ಎಂದು ಇತಿಹಾಸ ತಜ್ಞ ಡಾ. ಎಂ.ವೈ. ಸಾವಂತ ಹೇಳಿದರು.
ನಗರದ ಕ್ಲಾಸಿಕ್​ ಕೆಎಎಸ್​, ಐಎಎಸ್​ ಸ್ಟಡಿ ಸರ್ಕಲ್​ ಸಂಸ್ಥೆಗೆ ಸಮಾಜ ಕಲ್ಯಾಣ ಇಲಾಖೆಯ ಪರೀಾ ಪೂರ್ವ ತರಬೇತಿ ಕೇಂದ್ರದಿಂದ ಐಎಎಸ್​, ಕೆಎಎಸ್​ ಉಚಿತ ತರಬೇತಿಗೆ ಆಯ್ಕೆಯಾದ ಅಭ್ಯಥಿರ್ಗಳ ಸ್ವಾಗತ ಮತ್ತು ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಉತ್ತಮ ಅಂಕಗಳ ಗಳಿಕೆಗೆ ಕಠಿಣ ಪರಿಶ್ರಮ ಅತ್ಯಂತ ಮುಖ್ಯವಾಗಿದೆ. ಸತತ ಅಧ್ಯಯನದ ಮೂಲಕ ಸ್ಪರ್ಧಾತ್ಮಕ ಪರೀೆಗಳಿಗೆ ಸದಾ ಸಿದ್ಧರಿರಾಗಿರಬೇಕು ಎಂದರು.
ಅಧ್ಯತೆ ವಹಿಸಿದ್ದ ಕ್ಲಾಸಿಕ್​ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ$್ಮಣ ಉಪ್ಪಾರ ಮಾತನಾಡಿ, ಅಧ್ಯಯನವನ್ನು ತಪಸ್ಸೆಂದು ತಿಳಿದು ಗುರಿಯೆಡೆಗೆ ಸಾಗಿದಾಗ ಬಡತನ ಮತ್ತು ಅವಮಾನಗಳು ಸಾಧನೆಗೆ ಅಡ್ಡಿಯಾಗಲಾರವು. ಕಠಿಣ ಪರಿಶ್ರಮವು ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ಮಾರ್ಗವಾಗಿದೆ ಎಂದರು.
ಪ್ರಾಧ್ಯಾಪಕರಾದ ವಿಜಯೀಂದ್ರ ಮಹಿಷಿ, ರವಿ ನಾಯ್ಕರ, ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ. ಅತಿಥಿಗಳಾಗಿ ಆಗಮಿಸಿದ್ದರು. ಸಂಯೋಜಕ ಬಸವರಾಜ ಕುಪ್ಪಸಗೌಡ್ರ ಸ್ವಾಗತಿಸಿದರು. ವ್ಯವಸ್ಥಾಪಕ ದೀಪಕ ಜೋಡಂಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net