ನೊಂದವರ ದನಿಯಾಗಿದ್ದ ಮುಳ್ಳೂರು ನಾಗರಾಜ್

Oplus_131072
ಪಟ್ಟಣದ ಭಾರ್ಗವಿ ಚಿತ್ರಮಂದಿರದ ಬಳಿ ಇರುವ ರಸ್ತೆಗೆ ಅಳವಡಿಸಿರುವ ಮುಳ್ಳೂರು ನಾಗರಾಜ್ ಅವರ ನಾಮಫಲಕವನ್ನು ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ಶ್ರೀಕಂಠ, ಸಿ.ಎಂ.ನರಸಿಂಹಮೂರ್ತಿ ಇದ್ದರು.
Published on

ನಂಜನಗೂಡು: ಸಾಹಿತಿ ಮುಳ್ಳೂರು ನಾಗರಾಜ್ ಅವರು ನೊಂದವರ ದಿಟ್ಟ ದನಿಯಾಗಿದ್ದರು.

ಇಂದು ನಮ್ಮೊಂದಿಗೆ ದೈಹಿಕವಾಗಿಲ್ಲ. ಮಾನಸಿಕವಾಗಿ ಹೋರಾಟದ ತಳಹದಿ ಆಯಾಗಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ನಗರಸಭೆ ಹಾಗೂ ಮುಳ್ಳೂರು ನಾಗರಾಜು ಅಭಿಮಾನಿಗಳ ಬಳಗದ ಸಂಯುಕ್ತ ಆಶ್ರಯದಲ್ಲಿ ಭಾರ್ಗವಿ ಚಿತ್ರಮಂದಿರದ ರಸ್ತೆಗೆ ಆಲವಡಿಸಿರುವ ದಲಿತ ಸಂಘಟನೆಯ ಹಿರಿಯ ಹೋರಾಟಗಾರ, ಸಾಹಿತಿ ಮುಳ್ಳೂರು ನಾಗರಾಜ್ ಹೆಸರಿನ ನಾಮಫಲಕವನ್ನು ಶನಿವಾರ ಉದ್ಘಾಟಿಸಿ ಬಳಿಕ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಅವರ ಹೋರಾಟ, ಪ್ರತಿಭಟನೆ, ಸಾಹಿತ್ಯದ ಮುಖಾಂತರ ಇನ್ನು ಜೀವಂತವಾಗಿದೆ. ಅವರ ಚಿಂತನೆಗಳು ಸದಾ ಕಾಲ ಉಳಿಯಲುದೆ ಎಂದು ಸ್ಮರಿಸಿದರು.

ನಗರಸಭೆ ಅಧ್ಯಕ್ಷ ಶ್ರೀಕಂಠ ಮಾತನಾಡಿ, ಮುಳ್ಳೂರು ನಾಗರಾಜ ಅವರಂತೆ ಸದಾ ಒಳ್ಳೆಯ ಕೆಲಸ ಮಾಡಿದರೆ ಮಾತ್ರ ಜನ ಗುರುತಿಸುತ್ತಾರೆ. ಜನರಿಗೋಸ್ಕರ ಹೋರಾಟ ಮಾಡಿ ಜೀವನ ಸವೆಸಿದರು. ಅವರ ಹೋರಾಟ ಜನರಲ್ಲಿ ಸದಾ ನೆನಪಾಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಪ್ರಗತಿಪರ ಸಾಹಿತಿ ಡಾ.ಎಂ.ಎಸ್.ಶೇಖರ್, ಪ್ರಾಧ್ಯಾಪಕರಾದ ಡಾ.ಡಿ.ಆನಂದ್, ಡಾ.ಅಪ್ಪಗೆರೆ ಸೋಮಶೇಖರ್, ಮುಳ್ಳೂರು ನಾಗರಾಜ್ ಅವರ ಪತ್ನಿ ಪುಟ್ಟಲಕ್ಷ್ಮಮ್ಮ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net