ಡಿ.28ರಂದು ಮೂಲ್ಕಿ ಸೀಮೆ ಅರಸು ಕಂಬಳ : ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು ಮಾಹಿತಿ

New Project (23)
Published on

ಮೂಲ್ಕಿ: ಮೂಲ್ಕಿ ಸೀಮೆ ಅರಸು ಕಂಬಳ ಡಿ.28ರಂದು ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ತಿಳಿಸಿದ್ದಾರೆ.

ಮೂಲ್ಕಿ ಸೀಮೆ ಅರಸು ಕಂಬಳ ಸುಮಾರು 400 ವರ್ಷದ ಇತಿಹಾಸ ಹೊಂದಿದ್ದು, ಅದರದ್ದೇ ಆದ ಸಂಪ್ರದಾಯ ಹಾಗೂ ವೈಶಿಷ್ಟೃ ಹೊಂದಿರುತ್ತದೆ. ಇಂದಿನ ಕಾಲಘಟ್ಟದಲ್ಲಿ ಕಂಬಳ ಎನ್ನುವುದು ಒಂದು ಸಾಂಪ್ರದಾಯಿಕ ಹಾಗೂ ಆಧುನಿಕ ಜನಪದ ಕ್ರೀಡೆಯಾಗಿದ್ದರೂ ಮೂಲ್ಕಿ ಸೀಮೆ ಅರಸು ಕಂಬಳ ಅದರದ್ದೇ ಆದ ಸಂಪ್ರದಾಯ ಪಾಲಿಸಿಕೊಂಡು ಬಂದಿದೆ ಅದನ್ನು ಮುಂದುವರಿಸುವುದು ನಮ್ಮೆಲ್ಲರ ಜವಾಬ್ದಾರಿ. ಹಿಂದಿನ ಕಾಲದಿಂದಲೂ ಮೂಲ್ಕಿ ಸೀಮೆ ಅರಸರ ನೇತೃತ್ವದಲ್ಲಿ, ಮೂಲ್ಕಿ ಅರಮನೆ ರಾಜ ಪುರೋಹಿತರ ಉಪಸ್ಥಿತಿಯಲ್ಲಿ ದಿನಾಂಕ ನಿಗದಿ ಪಡಿಸುವುದು ಪದ್ಧತಿ. ಆ ಪದ್ಧತಿ ನಾವು ಮೀರಲು ಅಸಾಧ್ಯ. ಜಿಲ್ಲಾ ಕಂಬಳ ಸಮಿತಿ ಇಕ್ಕಟ್ಟಿನ ಪರಿಸ್ಥಿತಿ ಅರ್ಥೈಸಿಕೊಂಡು ಡಿ.28ರಂದು ಮೂಲ್ಕಿ ಸೀಮೆ ಅರಸು ಕಂಬಳ ಸಾಂಪ್ರದಾಯಿಕವಾಗಿ, ವಿಜೃಂಭಣೆಯಿಂದ ನಡೆಯಲಿದೆ. ಕಂಬಳಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net